alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಸೇರಲೆಂದೇ ಭಾರತಕ್ಕೆ ಬಂದಿದ್ರು ಈ ಪ್ರವಾಸಿಗರು!

ಜೈಲು ವಾಸಿಗಳಾಗುವುದು ಆರೋಪಿಗಳು ಹಾಗೂ ಅಪರಾಧಿಗಳೆಂಬ ಮಾತಿದೆ. ಆದರೆ ಜೈಲೂ ಸಹ ಈಗ ಪ್ರವಾಸೋದ್ಯಮ ವ್ಯಾಪ್ತಿಗೆ ಒಳಪಟ್ಟಿದ್ದು, ನಿಗದಿತ ಶುಲ್ಕ ಪಾವತಿಸಿದರೆ ಜೈಲು ವಾಸಿಗಳ ಅನುಭವ ಲಭ್ಯವಾಗಲಿದೆ.

ತೆಲಂಗಾಣದ ಹೈದರಾಬಾದ್ ನಲ್ಲಿ ಜೈಲೊಂದನ್ನು ಇದಕ್ಕಾಗಿ ಮೀಸಲಿಡಲಾಗಿದ್ದು, “Feel The Jail” ಎಂದು ಇದಕ್ಕೆ ಹೆಸರಿಡಲಾಗಿದೆ. ಜೈಲು ಅನುಭವವನ್ನು ಪಡೆಯಲೆಂದೇ ಇಲ್ಲಿಗೆ ಆಗಮಿಸಿದ ಮಲೇಶಿಯಾದ ಇಬ್ಬರು ಪ್ರವಾಸಿಗರು ಎರಡು ದಿನಗಳ ಕಾಲ ಇಲ್ಲಿ ಉಳಿದಿದ್ದಾರೆ.

220 ವರ್ಷ ಹಳೆಯದಾದ ಸಂಗಾರೆಡ್ಡಿ ಜೈಲಿನಲ್ಲಿ ಮಲೇಶಿಯಾದ ಡೆಂಟಿಸ್ಟ್ Ng Inn Wo ಹಾಗೂ ಆತನ ಸ್ನೇಹಿತ ರೆಸ್ಟೋರೆಂಟ್ ಮಾಲೀಕ Ong Boon Tek ಜೈಲು ಅನುಭವ ಪಡೆಯಲು ಮಲೇಶಿಯಾದ ಕೌಲಲಂಪೂರ್ ನಿಂದ ಭಾರತಕ್ಕೆ ಆಗಮಿಸಿದ್ದು, ತಾವು ಜೈಲಿನಲ್ಲಿದ್ದ ಅವಧಿಯಲ್ಲಿ ಕೈದಿಗಳಿಗೆ ನೀಡಲಾಗುವ ಸಮವಸ್ತ್ರ ಧರಿಸಿ ಜೈಲುವಾಸಿಗಳಿಗೆ ನೀಡಲಾಗುವ ಭಾರತೀಯ ಆಹಾರವನ್ನು ಸವಿದಿದ್ದಾರೆ.

ತಮ್ಮ ಈ ಅನುಭವದ ಕುರಿತು ಥ್ರಿಲ್ ಆಗಿರುವ ಸ್ನೇಹಿತರಿಬ್ಬರು, ಜೀವಮಾನದಲ್ಲೇ ಮರೆಯಲಾಗದ ಘಟನೆ ಎಂದು ಇದನ್ನು ಬಣ್ಣಿಸಿದ್ದಾರೆ. ತಮ್ಮ ಎರಡು ದಿನಗಳ ಜೈಲು ಅನುಭವಕ್ಕಾಗಿ ಸ್ನೇಹಿತರು 500 ರೂ. ಪಾವತಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...