alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟವಾಗಿದೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಈ ಪ್ರದೇಶ

ನಾಗಾಲ್ಯಾಂಡಿನಲ್ಲಿ ಸಮಾಜಕ್ಕೆ ಸುಳಿಯದೇ ಇರುವ ಒಂದು ನಿರ್ಜನ ಪ್ರದೇಶವಿದೆ. ಇಲ್ಲಿನ ರಾಜ ಮಧ್ಯಾಹ್ನದ ಊಟವನ್ನು ಭಾರತದಲ್ಲಿ ಮಾಡಿದರೆ, ನಿದ್ರೆಯನ್ನು ರಾತ್ರಿ ಮ್ಯಾನ್ಮಾರ್ ನಲ್ಲಿ ಮಾಡುತ್ತಾನೆ. ಈ ಪ್ರದೇಶ ಭಾರತ ಮತ್ತು ಮ್ಯಾನ್ಮಾರ್ ರಾಷ್ಟ್ರಗಳ ಗಡಿ ಭಾಗದಲ್ಲಿದೆ.

ಇಲ್ಲಿನ ಅರ್ಧ ಭಾಗದ ಜನರು ಭಾರತದಲ್ಲಿ, ಉಳಿದರ್ಧ ಮ್ಯಾನ್ಮಾರ್ ನಲ್ಲಿ ನೆಲೆಸಿದ್ದಾರೆ. ನಮ್ಮ ದೇಶ ಸ್ನೇಹಜೀವಿ. ಬೇರೆಲ್ಲಾ ದೇಶಗಳಿಗೆ ಹೋಲಿಸಿದರೆ, ಮೋನ್ ಜಿಲ್ಲೆಯ ಲಾಂಗ್ವಾ ಗಡಿ ಭಾಗ ವಿಭಿನ್ನವಾಗಿದೆ.

1970-71ರ ಅವಧಿಯಲ್ಲಿ 30 ಹಳ್ಳಿಗಳ ರಾಜನ ಆಸ್ಥಾನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಅದರಲ್ಲಿ ಒಂದು ಭಾಗ ಮ್ಯಾನ್ಮಾರ್ ನಲ್ಲಿ, ಮತ್ತೊಂದು ಭಾಗ ಭಾರತದಲ್ಲಿ ರಚನೆಗೊಂಡಿತು. ಎರಡೂ ಭಾಗದಲ್ಲಿರುವ ಗ್ರಾಮಸ್ಥರು ಕೋನ್ಯಕ್ ಗುಡ್ಡಗಾಡು ಜನಾಂಗದವರು.

ಇವರು ಕಾಡಿನಿಂದ ಸೌದೆ ತಂದು, ಜಿಂಕೆ-ಕರಡಿಗಳನ್ನು ಬೇಟೆಯಾಡಿ ಜೀವನ ಸಾಗಿಸುತ್ತಿದ್ದಾರೆ. ಕೃಷಿ ವಿಚಾರಕ್ಕೆ ಬಂದರೆ, ಇವರು ಅಫೀಮನ್ನು ಹೆಚ್ಚಾಗಿ ಸೇವಿಸುವುದರಿಂದ ಇಲ್ಲಿ ಅಫೀಮಿಗೆ ಭಾರೀ ಬೇಡಿಕೆಯಿದೆ. ಆದರೆ ಈ ಹಿಂದೆ ನಡೆದ ಚರ್ಚ್ ನ ವಿವಾದದಿಂದ ಲಾಂಗ್ವಾ ಸುತ್ತಮುತ್ತ ಅಫೀಮು ಬೆಳೆಯುವುದನ್ನು ನಿಷೇಧಗೊಳಿಸಲಾಯಿತು. ಇನ್ನು ಗಡಿ ಭಾಗದಲ್ಲಿರುವ ರಸ್ತೆಯಲ್ಲಿ ಸುಂದರ ಮಾರುಕಟ್ಟೆ ಇದೆ. ಅಲ್ಲಿಗೆ ಬರುವ ಶೇ. 80ರಷ್ಟು ಗ್ರಾಹಕರು ಬರ್ಮಾ ದೇಶದವರಾಗಿದ್ದಾರೆ.

ವಲಸೆ ವಿಚಾರಕ್ಕೆ ಬಂದರೆ, ನಾಗಾಗಳು ಭಾರತದಿಂದ ಮ್ಯಾನ್ಮಾರ್ ದೇಶಕ್ಕೆ ಯಾವುದೇ ಅಡ್ಡಿಯಿಲ್ಲದೇ ವಲಸೆ ಹೋಗುತ್ತಾರೆ. ಕೆಲವರು ಯಾವುದೇ ಪರವಾನಗಿ, ದಾಖಲೆಗಳು ಇಲ್ಲದೇಯೇ ಬರ್ಮಾದವರೆಗೂ ಹೋಗಿ ಬಂದಿದ್ದಾರೆ. ಲಾಂಗ್ವಾ ಗಡಿ ಭಾಗದಲ್ಲಿ ಯಾವುದೇ ವಿವಾದವಿಲ್ಲದೇ ಅವರವರ ಇಷ್ದದ ಹಾಗೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಅಂದರೆ, ಬರ್ಮಾ ದೇಶದ ಮಕ್ಕಳು ಭಾರತದಲ್ಲಿರುವ ಶಾಲೆಗೆ ಬಂದು ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...