alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಉತ್ಸವಕ್ಕೂ ತಟ್ಟಲಿದೆ ಥರ್ಮಾಕೋಲ್ ನಿಷೇಧದ ಬಿಸಿ

ಮಹಾರಾಷ್ಟ್ರ ಸರ್ಕಾರ ಜೂನ್ ನಲ್ಲಿ ಪ್ಲಾಸ್ಟಿಕ್ ಬಳಕೆ, ಮಾರಾಟ, ಸಬರಾಜಿನ ಮೇಲೆ ನಿರ್ಬಂಧ ಹೇರಿದೆ. ಈಗ ಈ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಥರ್ಮಾಕೋಲ್ ಮತ್ತದರ ಉತ್ಪನ್ನಗಳ ಬಳಕೆ ಮತ್ತು ನಿಷೇಧ ತೆರವುಗೊಳಿಸೋಕೆ ಸಲ್ಲಿಸಿದ್ದ ಅರ್ಜಿಯನ್ನ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಥರ್ಮಾಕೋಲ್ ತಯಾರಕರು ಮತ್ತು ಅಲಂಕಾರಗಾರರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನ ವಜಾ ಗೊಳಿಸಿರುವ ಬಾಂಬೆ ಹೈಕೋರ್ಟ್ ಥರ್ಮಾಕೋಲ್ ಬಳಕೆ ಮೇಲಿನ ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಅಂತ ತಿಳಿಸಿದೆ.

ಥರ್ಮಾಕೋಲ್ ತಯಾರಕರ ಒಕ್ಕೂಟ ಈ ವರ್ಷ ಮಾತ್ರ ನಿಷೇಧ ಹಿಂಪಡೆಯುವಂತೆ ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. ಇದರಿಂದಾಗಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಗಣೇಶ ಉತ್ಸವಕ್ಕಾಗಿ ತಯಾರಾಗಿದ್ದ ಥರ್ಮಾಕೋಲ್ ವಸ್ತುಗಳನ್ನ ಮಾರಾಟ ಮಾಡುವಂತಿಲ್ಲ. ಇದರಿಂದಾಗಿ ಥರ್ಮಾಕೋಲ್ ತಯಾರಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುವ ಹಿನ್ನಲೆಯಲ್ಲಿ ಈ ಬಾರಿ ನಿಷೇಧ ತೆರವುಗೊಳಿಸುವಂತೆ ಮನವಿಯನ್ನ ಸಲ್ಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...