alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಠಾಣೆಗೆ ನಿದ್ರಿಸಲು ಬರುತ್ತಾರೆ ಕ್ರಿಮಿನಲ್ ಗಳು…!

ನಂಬಿದರೆ ನಂಬಿ ಬಿಟ್ಟರೆ ಬಿಡಿ….ಉತ್ತರ ಪ್ರದೇಶದ ಈ ಪೊಲೀಸ್ ಠಾಣೆಗೆ ಕುಖ್ಯಾತ ಪಾತಕಿಗಳು ರಾತ್ರಿ ನಿದ್ರಿಸಲು ಬರುತ್ತಾರೆ. ಪೊಲೀಸರೂ ಕೂಡಾ ಇದಕ್ಕೆ ಅಡ್ಡಿಪಡಿಸಲು ಹೋಗುವುದಿಲ್ಲ. ಹಾಗೆಂದು ಈ ಪಾತಕಿಗಳಿಗೆ ಮಲಗಲು ಬೇರೆ ಜಾಗವಿಲ್ಲವೆಂದಲ್ಲ. ಇದರ ಹಿಂದೆ ಸ್ವಾರಸ್ಯಕರ ಕಥೆಯಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸುತ್ತಲೇ ಭೂಗತ ಪಾತಕಿಗಳ ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕಲು ಮುಂದಾಗಿದ್ದರು. ಈ ಕಾರಣಕ್ಕಾಗಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಎನ್ ಕೌಂಟರ್ ಭಯಕ್ಕೆ ಬಿದ್ದು ರೌಡಿಗಳು ಸ್ವಯಂ ಪ್ರೇರಿತರಾಗಿ ಶರಣಾಗುತ್ತಿದ್ದಾರೆ. ತಾವು ಇನ್ನು ಮುಂದೆ ಯಾವುದೇ ಕ್ರಿಮಿನಲ್ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಪ್ರಮಾಣ ಮಾಡುತ್ತಿದ್ದಾರೆ.

ಅದೇ ರೀತಿ ಸೀತಾಪುರ್ ಜಿಲ್ಲೆಯ ಲಾಹರ್ಪುರ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಮಾಜಘಾತುಕ ವ್ಯಕ್ತಿಗಳು ತಾವು ಯಾವುದೇ ಪಾತಕಗಳಲ್ಲಿ ಪಾಲ್ಗೊಳ್ಳುತ್ತಿಲ್ಲವೆಂಬುದನ್ನು ಪೊಲೀಸರ ಮುಂದೆ ನಿರೂಪಿಸಲು ಪ್ರತಿನಿತ್ಯ ಠಾಣೆಗೆ ಹಾಜರಾತಿ ಹಾಕುತ್ತಿದ್ದಾರೆ. ಈ ಪೈಕಿ ಕೆಲವರು ರಾತ್ರಿಯಿಡಿ ಠಾಣೆಯಲ್ಲೇ ಮಲಗಿ ಬೆಳಿಗ್ಗೆ ಮನೆಗೆ ತೆರಳುತ್ತಿದ್ದಾರೆ. ಕ್ರಿಮಿನಲ್ ಕೃತ್ಯವೆಸಗುವವರು ಕಣ್ಣೆದುರೇ ಇರುವುದರಿಂದ ಪೊಲೀಸರೂ ನೆಮ್ಮದಿಯಿಂದಿದ್ದಾರೆ.

ಮಾಹಿತಿ ಪ್ರಕಾರ 20 ಮಾರ್ಚ್ 2017 ರಿಂದ 31 ಜನವರಿ 2018 ರವರೆಗೆ ಉತ್ತರ ಪ್ರದೇಶದಲ್ಲಿ 1144 ಎನ್ ಕೌಂಟರ್ ಗಳು ನಡೆದಿವೆ ಎನ್ನಲಾಗಿದ್ದು, ಇದರಲ್ಲಿ 34 ಕುಖ್ಯಾತ ಪಾತಕಿಗಳು ಹತರಾಗಿದ್ದಾರೆ. 2744 ಮಂದಿ ಬಂಧನಕ್ಕೊಳಗಾಗಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸರೂ ಹುತಾತ್ಮರಾಗಿದ್ದು, 247 ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಎನ್ ಕೌಂಟರ್ ಗೆ ಬೆಚ್ಚಿ ಬಿದ್ದಿರುವ ಕ್ರಿಮಿನಲ್ ಗಳು ಪಾತಕ ಎಸಗಲು ಭಯಪಡುತ್ತಿದ್ದು, ರಾಜ್ಯದಲ್ಲಿ ನೆಮ್ಮದಿ ನೆಲೆಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...