alex Certify
ಕನ್ನಡ ದುನಿಯಾ       Mobile App
       

Kannada Duniya

ನವ ವಿವಾಹಿತರ ಬದುಕನ್ನೇ ಭಸ್ಮ ಮಾಡಿದೆ ಥೇಣಿ ಕಾಡ್ಗಿಚ್ಚು

ನಾಲ್ಕು ತಿಂಗಳುಗಳ ಹಿಂದಷ್ಟೆ ಬಾಲ್ಯ ಸ್ನೇಹಿತೆಯನ್ನು ಮದುವೆಯಾಗಿದ್ದ ನವ ವಿವಾಹಿತ ಯುವಕ ಕಾಡ್ಗಿಚ್ಚಿಗೆ ಬಲಿಯಾಗಿದ್ದಾನೆ. ಆತನ ಪತ್ನಿ ಮದುರೈನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ನವ ಜೋಡಿ ವಿವೇಕ್ ಹಾಗೂ ದಿವ್ಯಾ ದುಬೈಗೆ ತೆರಳಲು ಸಜ್ಜಾಗಿದ್ದರು. ಅದಕ್ಕೂ ಮುನ್ನ ಟ್ರೆಕ್ಕಿಂಗ್ ಮಾಡಿಬಿಡೋಣ ಅಂತಾ ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿರೋ ಕುರಂಗಣಿ ಬೆಟ್ಟಕ್ಕೆ ಬಂದಿದ್ದರು.

ಬೆಟ್ಟದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ ವಿವೇಕ್ ಸುಟ್ಟು ಕರಕಲಾಗಿದ್ದಾನೆ. ದಿವ್ಯಾಗೂ ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ. ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರು ಮದುವೆಯನ್ನು ವಿರೋಧಿಸಿದ್ದರು.

ಆದ್ರೆ ಸಂಬಂಧಿಕರು ಮನವೊಲಿಸಿ ಮದುವೆ ನೆರವೇರಿಸಿದ್ದರು. ದಿವ್ಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ಲು, ವಿವೇಕ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಇಂಡೋನೇಷ್ಯಾಕ್ಕೆ ಪ್ರವಾಸ ತೆರಳಬೇಕೆಂಬ ಆಸೆ ದಿವ್ಯಾಗಿತ್ತು. ಮಾರ್ಚ್ ಅಂತ್ಯಕ್ಕೆ ಇಬ್ಬರೂ ದುಬೈಗೆ ತೆರಳಿ ಅಲ್ಲೇ ಸೆಟಲ್ ಆಗಲು ನಿರ್ಧಿರಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...