alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾದಲ್ಲಿ ದುರ್ಗೆ ಧರಿಸಿದ್ದಾಳೆ 22 ಕೆ.ಜಿ. ಬಂಗಾರ

ದುರ್ಗಾ ಪೂಜೆ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಲಂಡನ್ ಬ್ರಿಜ್, ಲಂಡನ್ ಐ ಮತ್ತು ಬಕಿಂಗ್ಹ್ಯಾಮ್ ಅರಮನೆ ಕೋಲ್ಕತ್ತಾದ ದುರ್ಗಾ ಪೆಂಡಾಲ್ ನಲ್ಲಿ ಕಾಣಸಿಗ್ತಿದೆ. ಇಷ್ಟೆ ಅಲ್ಲ ಬಕಿಂಗ್ಹ್ಯಾಮ್ ಪ್ಯಾಲೇಸ್ ನಲ್ಲಿ ತಾಯಿ ದುರ್ಗೆಗೆ ಬಂಗಾರದಿಂದ ಮಾಡಿದ ಸೀರೆಯುಡಿಸಲಾಗಿದೆ.

ಈ ಸೀರೆ ತಯಾರಿಸಲು 22 ಕ್ಯಾರೆಟ್ ನ 22 ಕಿಲೋ ಬಂಗಾರವನ್ನು ಬಳಸಲಾಗಿದೆ. ಇದ್ರ ಬೆಲೆ ಬರೋಬ್ಬರಿ 6.5 ಕೋಟಿ ರೂಪಾಯಿ. ಸೀರೆಗೆ ಹೂವಿನ ಎಲೆಗಳ ಜೊತೆಗೆ ನವಿಲಿನ ಚಿತ್ರವನ್ನು ಕಸೂತಿ ಮಾಡಿದ್ದಾರೆ. ಬಂಗಾರದ ಜೊತೆಗೆ ರತ್ನವನ್ನೂ ಬಳಸಲಾಗಿದೆ. 50 ಕಲಾವಿದರು ಎರಡೂವರೆ ತಿಂಗಳುಗಳ ಕಾಲ ಸೀರೆಗೆ ಡಿಸೈನ್ ಮಾಡಿದ್ದಾರೆ.

ಈ ಬಾರಿ ಹೊಸತನ್ನು ಮಾಡ ಬಯಸಿದ್ದೆವು. ಬಂಗಾರದ ಸೀರೆ ಮಾಡುವ ಕಲ್ಪನೆಯನ್ನು ಕಮಿಟಿಯ ಪ್ರಧಾನ ಕಾರ್ಯದರ್ಶಿಗಳು ನೀಡಿದ್ರು. ಅವ್ರ ಕಲ್ಪನೆಯಂತೆ ಸೀರೆ ಸಿದ್ದವಾಯ್ತು ಎಂದು ಪೂಜಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ 3 ಸಾವಿರ ಸ್ಥಳಗಳಲ್ಲಿ ದುರ್ಗಾ ದೇವಿ ಪೂಜೆ ನಡೆಯುತ್ತಿದೆ. ನಗರ ಹೊರತುಪಡಿಸಿ ಹಳ್ಳಿಗಳಲ್ಲಿಯೂ ದುರ್ಗೆಯ ಆರಾಧನೆ ಜೋರಾಗಿ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...