alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಸಂಸ್ಕೃತಿ ಉತ್ಸವದಲ್ಲಿ ಕಳ್ಳರಿಗೆ ಹಬ್ಬ !

laptop 16

ಯಾವುದೇ ಸಭೆ, ಸಮಾರಂಭ ನಡೆದರೆ, ಕಳ್ಳರಿಗೆ ಹಬ್ಬವೇ ಸರಿ. ಅದರಲ್ಲಿಯೂ ಬೃಹತ್ ಕಾರ್ಯಕ್ರಮಗಳು ನಡೆದರೆ ಕೇಳಬೇಕೆ? ಕದಿಯಲು ಹೇಳಿ ಮಾಡಿಸಿದಂತೆ ಇರುತ್ತದೆ. ಗುಂಪು ಗುಂಪಾಗಿ ವಾಹನಗಳಲ್ಲಿ ಕಳ್ಳತನಕ್ಕೆ ಹೋಗುವ ಗ್ಯಾಂಗ್ ಗಳೇ ಇವೆ.

ಇಂತಹ ಕಳ್ಳರ ಗ್ಯಾಂಗ್ ಗಳು ವಿಶ್ವಸಂಸ್ಕೃತಿ ಉತ್ಸವದಲ್ಲಿಯೂ ತಮ್ಮ ಕೈ ಚಳಕ ತೋರಿವೆ. ನವದೆಹಲಿಯ ಯಮುನಾ ನದಿ ತೀರದಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ವಿಶ್ವದ ವಿವಿಧ ಕಡೆಗಳಿಂದಲೂ ಜನ ಬಂದಿದ್ದರು. ಇಂತಹ ಬೃಹತ್ ಕಾರ್ಯಕ್ರಮದಲ್ಲಿ ಕಳ್ಳರಿಗೆ ಕದಿಯಲು ಸುಗ್ಗಿಯಾಗಿದೆ. ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಹರಿಯಾಣ, ಉತ್ತರಪ್ರದೇಶ, ತಮಿಳುನಾಡು, ಕೇರಳ ಮೊದಲಾದ ಕಡೆಗಳಿಂದ ಬಂದಿದ್ದ ಕಳ್ಳರು, ಭಾರೀ ಭದ್ರತೆಯ ನಡುವೆಯೂ, ವಿಶ್ವಸಂಸ್ಕೃತಿ ಉತ್ಸವದಲ್ಲಿ ವಿವಿಧ ವಸ್ತುಗಳನ್ನು ದೋಚಿದ್ದಾರೆ. ಹಲವಾರು ಪ್ರಕರಣ ನಡೆದಿದ್ದು, ಸುಮಾರು 30 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...