alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಮಾ ಮಾಲಿನಿ ಮನೆಯಲ್ಲಿ ಕಳ್ಳತನ

ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿಗೆ ಸೇರಿದ ಗೋಡೌನ್ ನಲ್ಲಿ ಕಳ್ಳತನವಾಗಿದೆ. ಅಂಧೇರಿಯಲ್ಲಿರುವ ಗೋಡೌನ್ ನಲ್ಲಿದ್ದ ಬಟ್ಟೆ, ಆಭರಣವನ್ನು ಕಳ್ಳತನ ಮಾಡಲಾಗಿದೆ. ಆಭರಣ, ಬಟ್ಟೆ ಸೇರಿ ಸುಮಾರು 90 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಮೂಲಗಳು ತಿಳಿಸಿವೆ.

ಚಲನಚಿತ್ರದಲ್ಲಿ ಬಳಸುತ್ತಿದ್ದ ಬಟ್ಟೆ ಹಾಗೂ ಆಭರಣಗಳನ್ನು ಹೇಮಾ ಮಾಲಿನಿ ಗೋಡೌನ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಗೋದಾಮನ್ನು ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತ ಕಳೆದ ಐದು ದಿನಗಳಿಂದ ಗೋದಾಮನ್ನು ಸ್ವಚ್ಛಗೊಳಿಸುತ್ತಿದ್ದ.

ಭಾರತೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಹೇಮಾ ಮಾಲಿನಿ ರಷ್ಯಾಕ್ಕೆ ತೆರಳಿದ್ದಾರೆ. ಕಳ್ಳತನವಾಗಿರುವ ಬಗ್ಗೆ ಮೊದಲು ಹೇಮಾ ಮಾಲಿನಿ ಮ್ಯಾನೇಜರ್ ಗೆ ತಿಳಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೇಮಾ ಮಾಲಿನಿ ನಿರಾಕರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...