alex Certify
ಕನ್ನಡ ದುನಿಯಾ       Mobile App
       

Kannada Duniya

ಅಶಿಸ್ತಿನ ನೆಪಹೇಳಿ ಮಕ್ಕಳಿಗೆ ಇಂಥ ಶಿಕ್ಷೆ ನೀಡಿದ ಶಿಕ್ಷಕ

ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆ ಶಿಕ್ಷಕನೊಬ್ಬ ಮಕ್ಕಳಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ. 8ನೇ ತರಗತಿ ವಿದ್ಯಾರ್ಥಿಗಳ ತಲೆ ಬೋಳಿಸಿ ಶಿಕ್ಷೆ ನೀಡಿದ್ದಾನೆ. ಮಕ್ಕಳು ಅಶಿಸ್ತು ಪಾಲನೆ ಮಾಡ್ತಿದ್ದರು ಎನ್ನುವ ಕಾರಣ ಹೇಳಿ ಶಿಕ್ಷಕ ಹೀಗೆ ಮಾಡಿದ್ದಾನೆ.

ಗುರುವಾದವರು ಮಕ್ಕಳಿಗೆ ಒಳ್ಳೆಯ ಪಾಠ ಹೇಳಬೇಕು. ಮಕ್ಕಳು ಮಾಡಿದ ತಪ್ಪನ್ನು ತಿದ್ದಿ ಅವರನ್ನು ಸರಿದಾರಿಗೆ ತರಬೇಕು. ಆದ್ರೆ ಅಶಿಸ್ತಿನ ಮಕ್ಕಳಿಗೆ ಶಿಕ್ಷಕ ಅಶಿಸ್ತಿನ ಶಿಕ್ಷೆ ನೀಡಿದ್ದಾನೆ. ಶಿಕ್ಷಕನ ಈ ಕ್ರಮಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ಶಿಕ್ಷಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಕ ಸಣ್ಣ-ಸಣ್ಣ ವಿಚಾರಕ್ಕೆ ಮಕ್ಕಳಿಗೆ ಹೊಡೆಯುತ್ತಿದ್ದ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಅಶಿಸ್ತಿನ ಕಾರಣ ಹೇಳಿ ಶಾಲಾ ಕೊಠಡಿಯಲ್ಲೇ ಮಕ್ಕಳ ತಲೆ ಬೋಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...