alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬಳಿ ಬಿದ್ದಿದ್ದ ಬ್ಯಾಗ್ ನಿಂದ ಬರ್ತಿತ್ತು ಮಗುವಿನ ಅಳು

ರಾಯ್ಪುರದ ಗಂಜ್ ಪ್ರದೇಶದ ರೋಡ್ ಡಿವೈಡರ್ ಬಳಿ ಮಗು ಅಳುವ ಶಬ್ಧ ಕೇಳಿದೆ. ಸ್ಥಳಕ್ಕೆ ಹೋಗಿ ನೋಡಿದ ಸಾರ್ವಜನಿಕರು ದಂಗಾಗಿದ್ದಾರೆ. ಕಪ್ಪು ಬಣ್ಣದ ಮಹಿಳೆಯರ ಬ್ಯಾಗ್ ನಲ್ಲಿ ನವಜಾತ ಶಿಶುವೊಂದು ಸಿಕ್ಕಿದೆ.

ಕಪ್ಪು ಬಣ್ಣದ ಬ್ಯಾಗ್ ನ ಒಂದು ಜಿಪ್ ತೆಗೆದಿದ್ದು, ಮಗುವಿನ ಕಾಲು ಹೊರ ಬಂದಿತ್ತು. ಮಗು ಅಳುವ ಶಬ್ಧ ಮಾತ್ರ ಕೇಳ್ತಾಯಿತ್ತು. ಸ್ಥಳೀಯರು ಬ್ಯಾಗ್ ಬಳಿ ಹೋಗಿ ನೋಡಿದ್ದಾರೆ. ಅಳ್ತಿದ್ದ ಮಗುವನ್ನು ಎದೆಗೊತ್ತಿಕೊಂಡಿದ್ದಾರೆ. ಅಳ್ತಿದ್ದ ಮಗು ಬೆಚ್ಚನೆ ಮೈ ತಾಗುತ್ತಿದ್ದಂತೆ ಅಳು ನಿಲ್ಲಿಸಿದೆ.

ಸದ್ಯ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಜನಿಸಿ 3-4 ದಿನವಾಗಿರಬಹುದೆಂದು ವೈದ್ಯರು ಅಂದಾಜಿಸಿದ್ದಾರೆ. ಮಗುವನ್ನು ಕಳ್ಳತನ ಮಾಡಿ ಸಿಕ್ಕಿಬೀಳುವ ಭಯಕ್ಕೆ ಇಲ್ಲಿಯೇ ಬಿಟ್ಟುಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಅಕ್ರಮ ಸಂಬಂಧವೂ ಇದಕ್ಕೆ ಕಾರಣವಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ರಸ್ತೆ ಬಳಿ ಸಿಸಿ ಟಿವಿಯಿದೆ. ಆದ್ರೆ ರೋಡ್ ಡಿವೈಡರ್ ಫೋಕಸ್ ಆಗ್ತಿಲ್ಲ. ಆದ್ರೂ ಸಿಸಿ ಟಿವಿ ದೃಶ್ಯ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...