alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪೆಟ್ರೋಲ್ ಬಂಕ್ ನೀಡ್ತಿದೆ ಭರ್ಜರಿ ಆಫರ್…!

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ ಕಾಣ್ತಿದೆ. ಮಧ್ಯಪ್ರದೇಶ ಸರ್ಕಾರ ಅತಿ ಹೆಚ್ಚು ವ್ಯಾಟ್ ವಿಧಿಸಿ ಜನರ ಸುಲಿಗೆ ಮಾಡ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಮಧ್ಯಪ್ರದೇಶದಲ್ಲಿ ಪೆಟ್ರೋಲ್-ಡಿಸೇಲ್ ವ್ಯಾಟ್ ಹೆಚ್ಚು. ಇದ್ರಿಂದಾಗಿ ಪೆಟ್ರೋಲ್ ಬಂಕ್ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.

ಮಹಾರಾಷ್ಟ್ರ ಗಡಿ ಸೇಂದವಾ ಬಳಿಯಿರುವ ಬೈಪಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತೈಲ ಮಾರಾಟ ಹೆಚ್ಚಿಸಲು ಆಕರ್ಷಕ ಆಫರ್ ನೀಡ್ತಿದ್ದಾರೆ. ಪೆಟ್ರೋಲ್ ಬಂಕ್ ಗೆ ಬರುವ ವಾಹನ ಸವಾರರಿಗೆ ಮೊಬೈಲ್, ವಾಚ್, ಎಸಿ, ಲ್ಯಾಪ್ ಟಾಪ್, ಬೈಕ್ ಜೊತೆ ಟೀ, ಕಾಫಿ, ಊಟ, ಉಪಹಾರವನ್ನು ಉಚಿತವಾಗಿ ನೀಡ್ತಿದ್ದಾರೆ.

ಈ ಆಫರ್ ನೀಡಲು ಬಂಕ್ ಮಾಲೀಕನ ಸ್ವಾರ್ಥ ಅಡಗಿದೆ. ಬಂಕ್ ಮಾಲೀಕರ ಪ್ರಕಾರ, ಮಧ್ಯಪ್ರದೇಶದಲ್ಲಿ ವ್ಯಾಟ್ ನಿಂದಾಗಿ ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚು. ಮಹಾರಾಷ್ಟ್ರದಲ್ಲಿ ವ್ಯಾಟ್ ಕಡಿಮೆಯಯಿದೆ. ಹಾಗಾಗಿ ಮಹಾರಾಷ್ಟ್ರದಿಂದ ಬರುವವರು ಇಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವುದಿಲ್ಲ.

ಮಧ್ಯಪ್ರದೇಶದಲ್ಲಿ ಪೆಟ್ರೋಲ್ ದುಬಾರಿ ಎಂಬ ಕಾರಣಕ್ಕೆ ಮಹಾರಾಷ್ಟ್ರದಲ್ಲಿಯೇ ಪೆಟ್ರೋಲ್ ತುಂಬಿಸಿಕೊಂಡು ಬರ್ತಾರೆ. ಜೊತೆಗೆ ವಾಪಸ್ ಮಹಾರಾಷ್ಟ್ರಕ್ಕೆ ಹೋಗಲು ಎಷ್ಟು ಅಗತ್ಯವೋ ಅಷ್ಟು ಪೆಟ್ರೋಲ್ ಸ್ಟಾಕ್ ಇಟ್ಟುಕೊಳ್ತಾರೆ. ಇದ್ರಿಂದ ಈ ಬಂಕ್ ಮಾಲೀಕನಿಗೆ ತುಂಬಾ ನಷ್ಟವಾಗ್ತಿದೆ.

ವಾಹನ ಸವಾರರನ್ನು ಸೆಳೆಯಲು ಮಾಲೀಕ ಈ ಕ್ರಮಕ್ಕೆ ಮುಂದಾಗಿದ್ದಾನೆ. ಆಫರ್ ಘೋಷಣೆ ಮಾಡ್ತಿದ್ದಂತೆ ಬಂಕ್ ಗೆ ಬರುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆಯಂತೆ. 100 ಲೀಟರ್ ಡೀಸೆಲ್ ತುಂಬಿದ್ರೆ ಲಾರಿ ಚಾಲಕರಿಗೆ ಟೀ, ಉಪಹಾರ ಉಚಿತವಾಗಿ ನೀಡ್ತಿದ್ದಾರೆ.

5,000 ಲೀಟರ್ ಡಿಸೇಲ್ ಖರೀದಿಸುವವರಿಗೆ ಮೊಬೈಲ್, ಸೈಕಲ್ ಅಥವಾ ವಾಚ್ ಸಿಗ್ತಿದೆ. 15,000 ಲೀಟರ್  ಗೆ ಕಪಾಟು, ಸೋಪಾ, ಬಂಗಾರದ ನಾಣ್ಯ ನೀಡಲಾಗ್ತಿದೆ. 25 ಸಾವಿರ ಲೀಟರ್ ಡಿಸೇಲ್ ಖರೀದಿ ಮಾಡಿದ್ರೆ ವಾಷಿಂಗ್ ಮಷಿನ್, 50,000 ಲೀಟರ್ ಡಿಸೇಲ್ ಖರೀದಿ ಮಾಡಿದವರಿಗೆ ಎಸಿ, ಲ್ಯಾಪ್ ಟಾಪ್ ಸಿಗಲಿದೆ. ಒಂದು ಲಕ್ಷ ಲೀಟರ್ ಡಿಸೇಲ್ ಖರೀದಿ ಮಾಡಿದವರಿಗೆ ಬೈಕ್ ಸಿಗಲಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...