alex Certify
ಕನ್ನಡ ದುನಿಯಾ       Mobile App
       

Kannada Duniya

ರಜೆಯನ್ನೇ ಪಡೆದಿಲ್ಲ ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ಮೋದಿಯವರು ಈಗ ವಿಶ್ವದ ಅಗ್ರಗಣ್ಯ ನಾಯಕರಲ್ಲೊಬ್ಬರು. ಸದ್ಯದಲ್ಲೇ ನರೇಂದ್ರ ಮೋದಿಯವರು ಯುಎಇ ಪ್ರವಾಸ ಕೈಗೊಳ್ಳುತ್ತಿದ್ದು, ಈ ಮಧ್ಯೆ ಗಲ್ಫ್ ನ್ಯೂಸ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪ್ರತಿನಿತ್ಯ ತಾವು 4 ರಿಂದ 6 ಗಂಟೆಗಳ ಕಾಲ ನಿದ್ರಿಸುವುದಾಗಿ ಹೇಳಿರುವ ಮೋದಿಯವರು, ಮಲಗುವ ಮುನ್ನ ಅಂದಿನ ದಾಖಲೆಗಳನ್ನು ಪರಿಶೀಲಿಸುವುದಲ್ಲದೇ ಮಾರನೇ ದಿನದ ಕಾರ್ಯಕ್ರಮಗಳ ಕುರಿತು ಅವಲೋಕನ ಮಾಡುವುದಾಗಿ ತಿಳಿಸಿದ್ದಾರೆ.

20 ವರ್ಷಗಳ ಹಿಂದೆ ತಾವು ರಜೆ ಪಡೆದಿರಬಹುದು ಎಂದಿರುವ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಯಾವುದೇ ರಜೆ ಪಡೆದಿಲ್ಲ. ಕೆಲಸ ಮಾಡುವುದರಲ್ಲೇ ತಮಗೆ ಖುಷಿ ಇದೆ ಎಂದಿದ್ದಾರೆ.

ಆಹಾರದ ಕುರಿತು ಮಾತನಾಡಿರುವ ಮೋದಿ, ತಮಗೆ ಇಂಥದ್ದೇ ಆಹಾರ ಬೇಕೆಂದು ಬಯಸುವುದಿಲ್ಲ ಆದರೆ ಸಸ್ಯಹಾರವಾಗಿರಬೇಕಷ್ಟೇ ಎಂದು ಹೇಳಿದ್ದಾರೆ. ಭಾರತದ ಬಹುತೇಕ ಭಾಗಗಳಿಗೆ ತಾವು ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಆಹಾರವನ್ನೇ ಸೇವಿಸಿದ್ದೇನೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಹೀಗಾಗಿ ದೇಶದ ಸಂಸ್ಕೃತಿಯ ಪರಿಚಯವೂ ತಮಗಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...