alex Certify
ಕನ್ನಡ ದುನಿಯಾ       Mobile App
       

Kannada Duniya

72 ರ ವರನಿಗೆ ವಧುವಾದ್ಲು 62 ರ ಮಹಿಳೆ…!

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿ ಜಾತಿ, ಮತ, ವಯಸ್ಸಿನ ಅಂತರ ಕೇಳುವುದಿಲ್ಲ. ಹಾಗೆ ಮದುವೆಗೂ ವಯಸ್ಸಿನ ಮಿತಿಯಿಲ್ಲ. ಒಂಟಿ ಜೀವ ಜಂಟಿಯಾಗಬಯಸಿದ್ರೆ ಯಾವ ವಯಸ್ಸಿನಲ್ಲಿ ಕೂಡ ಮದುವೆ ಆಗಬಹುದು. ಇದಕ್ಕೆ ಮಧ್ಯಪ್ರದೇಶದ ರಾಜ್ಗಡದ ಜೋಡಿ ಉತ್ತಮ ಉದಾಹರಣೆ.

ನಿವೃತ್ತ ಶಾಲಾ ಶಿಕ್ಷಕರೊಬ್ಬರು ಪಕ್ಕದ ಮನೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ಕೈ ಹಿಡಿದಿದ್ದಾರೆ. ಮುಸ್ಲಿಂ ಸಂಪ್ರದಾಯದಂತೆ ಮದುವೆ ನೆರವೇರಿದೆ. 72 ವರ್ಷದ ತಾಹಿರ್ ಹುಸೇನ್ 62 ವರ್ಷದ ರೋಷನ್ ಜಿಯಾ ಜೊತೆ ದಾಂಪತ್ಯ ಶುರುಮಾಡಿದ್ದಾರೆ.

ನಿವೃತ್ತ ಶಾಲಾ ಶಿಕ್ಷಕ ತಾಹಿರ್ ಗೆ ಈ ಹಿಂದೆ ಮದುವೆಯಾಗಿತ್ತು. ಎರಡು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಮೊದಲ ಪತ್ನಿ ನಿಧನರಾಗಿದ್ದಾರೆ. ರೋಷನ್ ಜಿಯಾ ತಂದೆ ಹಾಗೂ ಸಹೋದರನ ಜೊತೆ ವಾಸವಾಗಿದ್ದರು. ಅವರಿಗೆ ಮದುವೆಯಾಗಿರಲಿಲ್ಲ. ಆಗಾಗ ಮನೆಗೆ ಬರ್ತಿದ್ದ ತಾಹಿರ್ ಜೊತೆ ರೋಷನ್ ಆಪ್ತವಾಗಿ ಮಾತನಾಡುತ್ತಿದ್ದರು. ದಿನ ಕಳೆದಂತೆ ಇಬ್ಬರೂ ಹತ್ತಿರವಾಗಿದ್ದಾರೆ. ಮದುವೆಯಾಗುವ ತೀರ್ಮಾನ ಕೈಗೊಂಡಿದ್ದಾರೆ. ಭಾನುವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆ ನೆರವೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...