alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿಗೆ ಬಂತು ವಿಜಯ್ ಮಲ್ಯರ ಐಷಾರಾಮಿ ಕಾರುಗಳು

mallaya-cars_65ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಅವರ ‘ಕಿಂಗ್ ಫಿಷರ್ ಹೌಸ್’ ಹರಾಜು ಮಾಡಲು ವಿಫಲವಾಗಿದ್ದ ಬ್ಯಾಂಕ್ ಗಳು ಈಗ ವಿಜಯ್ ಮಲ್ಯರ ಕಂಪನಿಗೆ ಸೇರಿದ್ದ 8 ಐಷಾರಾಮಿ ಕಾರುಗಳನ್ನು ಹರಾಜು ಮಾಡಲು ಮುಂದಾಗಿವೆ.

ಈ ಕಾರುಗಳು ಸದ್ಯ ‘ಕಿಂಗ್ ಫಿಷರ್ ಹೌಸ್’ ನ ಗ್ಯಾರೇಜಿನಲ್ಲಿದ್ದು ಆಗಸ್ಟ್ 25 ರಂದು ‘ಎಲ್ಲಿದೆಯೋ ಹೇಗಿದೆಯೋ ಹಾಗೆ’ ಹರಾಜು ಮಾಡಲಾಗುವುದೆಂದು ಹೇಳಲಾಗಿದೆ. ಹರಾಜಿನಲ್ಲಿ ಭಾಗವಹಿಸಲು ಆಗಸ್ಟ್ 23 ರಂದು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಜುಲೈ 29 ಹಾಗೂ ಆಗಸ್ಟ್ 5 ರಂದು ಕಾರುಗಳ ಪರಿಶೀಲನೆಗೆ ಅವಕಾಶ ನೀಡಲಾಗಿದ್ದು, ನೋಂದಣಿ ಶುಲ್ಕ 2,000 ರೂ. ಗಳೆಂದು ತಿಳಿಸಲಾಗಿದೆ. ಈ ಹಿಂದೆ ‘ಕಿಂಗ್ ಫಿಷರ್ ಹೌಸ್’ ಹರಾಜು ಮಾಡಲು ಮುಂದಾಗಿದ್ದ ಬ್ಯಾಂಕ್, ಅದಕ್ಕೆ 150 ಕೋಟಿ ರೂ. ನಿಗದಿಪಡಿಸಿದ್ದು, ಯಾರೂ ಕೊಂಡುಕೊಳ್ಳಲು ಮುಂದೆ ಬಾರದ ಕಾರಣ 135 ಕೋಟಿ ರೂ. ಗೆ ಇಳಿಸಲಾಗಿತ್ತಾದರೂ ಹರಾಜು ಮಾಡಲು ಸಾಧ್ಯವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...