alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ನಡೆಯುತ್ತೆ ”ಭೂತ”ಗಳ ಮೇಳ…!

ಭೂತಗಳನ್ನು ನಂಬೋದು, ಬಿಡೋದು ಅವ್ರವರ ನಂಬಿಕೆಗೆ ಬಿಟ್ಟದ್ದು. ಭೂತ ಇದೆ ಎಂದು ನಂಬುವ ಜನರು, ಭೂತ ಮೈಮೇಲೆ ಬರುತ್ತೆ ಎಂಬುದನ್ನು ನಂಬುತ್ತಾರೆ. ಸಾಮಾನ್ಯ ಮನುಷ್ಯನ ದೇಹ ಪ್ರವೇಶ ಮಾಡುವ ಆತ್ಮಗಳು ನಿಯಂತ್ರಣಕ್ಕೆ ಸಿಗುವುದಿಲ್ಲವೆಂಬ ನಂಬಿಕೆಯೂ ಇದೆ. ಇಂಥ ಜನರಿಗಾಗಿಯೇ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಶೇಷ ಮೇಳವೊಂದು ನಡೆಯುತ್ತದೆ.

ಭೂತಗಳ ಮೇಳ ಎಂದೇ ಅದಕ್ಕೆ ಹೆಸರು. ಭೂತ ಮೈಮೇಲೆ ಬಂದಿರುವ ವ್ಯಕ್ತಿಗಳೇ ಇಲ್ಲಿಗೆ ಬರ್ತಾರೆ. ಅವ್ರ ಅವತಾರ ನೋಡಿ ಜನಸಾಮಾನ್ಯರು ಭಯಗೊಳ್ಳೋದು ಗ್ಯಾರಂಟಿ. ಇಲ್ಲಿನವರ ಪ್ರಕಾರ ಈ ಭೂತಗಳ ಮೇಳ ಸುಮಾರು 350 ವರ್ಷಗಳಿಂದ ನಡೆದುಕೊಂಡು ಬಂದಿದೆಯಂತೆ.

ಭೂತ ಮೈಮೇಲೆ ಬಂದಿರುವ ವ್ಯಕ್ತಿಗಳು ಇಲ್ಲಿಗೆ ಬಂದು ಭೂತದಿಂದ ಮುಕ್ತಿಹೊಂದಿ ಹೋಗ್ತಾರಂತೆ. ಸಾವಿರಾರು ಜನರು ಭೂತ ಬಿಡಿಸಿಕೊಂಡು ಹೋಗಿದ್ದಾರಂತೆ. ವಿಶೇಷವೆಂದ್ರೆ ಮಕ್ಕಳಾಗದವರು ಇಲ್ಲಿಗೆ ಬಂದು ಸಂತಾನ ಪ್ರಾಪ್ತಿಗೆ ಪ್ರಾರ್ಥನೆ ಮಾಡುತ್ತಾರೆ. ಮಿರ್ಜಾಪುರದ ಥಾನಾ ಪ್ರದೇಶದಲ್ಲಿ ಈ ಮೇಳ ನಡೆಯುತ್ತದೆ. ಬಹುತೇಕ ಆದಿವಾಸಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...