alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವವಿದ್ಯಾನಿಲಯದ ಗರ್ಲ್ಸ್ ಹಾಸ್ಟೆಲ್ ನಲ್ಲಿ ವಿಚಿತ್ರ ಆದೇಶ

ಒಡಿಶಾದ ವಿಶ್ವವಿದ್ಯಾನಿಲಯವೊಂದರ ಹುಡುಗಿಯರ ಹಾಸ್ಟೆಲ್ ನಲ್ಲಿ ವಿಚಿತ್ರ ಆದೇಶವೊಂದು ಒಂದು ಜಾರಿಯಾಗಿದೆ. ಅದ್ರ ಪ್ರಕಾರ ಯಾವುದೇ ಹಾಸ್ಟೆಲ್ ಹುಡುಗಿಯರು ದಾರಿ ಪಕ್ಕ ನಿಂತು ಹುಡುಗರ ಜೊತೆ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡಿದ್ರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.

ಸಂಬಲ್ಪುರ ಸಮೀಪದ ಬರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಹಾಸ್ಟೆಲ್ ನಲ್ಲಿ ಈ ಆದೇಶ ಹೊರಡಿಸಲಾಗಿದೆ. ಡಿಸೆಂಬರ್ 1ರಂದು ನೊಟೀಸ್ ಜಾರಿಯಾಗಿದೆ. ಕುಲಪತಿ ಆದೇಶದಂತೆ ರೋಹಿಣಿ ಹಾಲ್ ಆಫ್ ರೆಸಿಡೆನ್ಸ್ ವಿದ್ಯಾರ್ಥಿನಿಯರು ರಸ್ತೆ ಮಧ್ಯೆ ಹುಡುಗರ ಜೊತೆ ಮಾತನಾಡಬಾರದು.ಇದನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ನೊಟೀಸ್ ನಲ್ಲಿ ಹೇಳಲಾಗಿದೆ.

ಹುಡುಗಿಯರ ಸುರಕ್ಷತೆಗಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಹೇಳದೆ ಕೇಳದೆ ಹುಡುಗಿಯರು ಹಾಸ್ಟೆಲ್ ನಿಂದ ಹೊರಗೆ ಹೋಗ್ತಾರೆ. ದಾರಿ ಮಧ್ಯೆ ಹುಡುಗ್ರ ಜೊತೆ ಹರಟೆ ಹೊಡೆಯುತ್ತ ನಿಲ್ಲುತ್ತಾರೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...