alex Certify
ಕನ್ನಡ ದುನಿಯಾ       Mobile App
       

Kannada Duniya

ನೇರ ಪ್ರಸಾರವಾಗಲಿದೆ ಸುಪ್ರೀಂ ವಿಚಾರಣೆ

ಶೀಘ್ರವೇ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಯನ್ನು ಮನೆಯಲ್ಲೇ ಕುಳಿತು ನೋಡುವ ವ್ಯವಸ್ಥೆ ಬರಲಿದೆ. ಸುಪ್ರೀಂಕೋರ್ಟ್ ವಿಚಾರಣೆ ನೇರ ಪ್ರಸಾರವಾಗಲಿದೆ. ಅಟಾರ್ನಿ ಜನರಲ್ ವೇಣುಗೋಪಾಲ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಶೀಘ್ರವೇ ಸುಪ್ರೀಂ ಕೋರ್ಟ್ ವಿಚಾರಣೆ ನೇರ ಪ್ರಸಾರವಾಗುವ ಸಾಧ್ಯತೆಯಿದೆ. ಆರಂಭದಲ್ಲಿ ಸಂವಿಧಾನಾತ್ಮಕ ವಿಚಾರಗಳ ವಿಚಾರಣೆ ನೇರ ಪ್ರಸಾರವಾಗಲಿದೆ. ಅದು ಯಶಸ್ವಿಯಾದಲ್ಲಿ ಉಳಿದ ನ್ಯಾಯಾಲಯಗಳ ವಿಚಾರಣೆ ಕೂಡ ನೇರ ಪ್ರಸಾರವಾಗುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ.

ಹಿರಿಯ ವಕೀಲ ಇಂದಿರಾ ಜೈ ಸಿಂಗ್ ಸಲ್ಲಿಸಿದ ಅರ್ಜಿಯ ಮೇರೆಗೆ ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ತೋರಿದೆ. ಸಂವಿಧಾನಾತ್ಮಕ ಹಾಗೂ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ವಿಚಾರಣೆ ನೇರ ಪ್ರಸಾರವಾಗಬೇಕೆಂದು ಇಂದಿರಾ ಜೈಸಿಂಗ್ ಹೇಳಿದ್ದರು. ಕೋರ್ಟ್ ಕ್ಲಿಪಿಂಗ್ ಹಾಗೂ ವಿಡಿಯೋವನ್ನು  ವಾಣಿಜ್ಯ ಬಳಕೆಗೆ ಬಳಸಬಾರದು ಎಂದು ಕೋರ್ಟ್ ಹೇಳಿದೆ.

ಅಟಾರ್ನಿ ಜನರಲ್ ವೇಣುಗೋಪಾಲ್ ಅವ್ರಿಗೆ ಸಲಹೆಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಆಗಸ್ಟ್ 3ರಂದು ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...