alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಬ್ ಡ್ರೈವರ್ ಆರ್ಮಿ ಆಫೀಸರ್ ಆದ ರೋಚಕ ಕಥೆ…!

ಇದು ಕ್ಯಾಬ್ ಡ್ರೈವರ್ ಒಬ್ಬ ಆರ್ಮಿ ಆಫೀಸರ್ ಆದ ಕಥೆ. ಮಾರ್ಚ್ 10 ರಂದು ಓಂ ಪೈಥಾನೆ ಎನ್ನುವವರು ಆರ್ಮಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಿಂದ ಪಾಸಾಗಿ ಹೊರಬಂದ 256 ಜನರಲ್ಲಿ ಒಬ್ಬರು. ಪೈಥಾನೆ ಅವರು ಇಂಥದ್ದೊಂದು ದೊಡ್ಡ ಪರೀಕ್ಷೆ ಪಾಸಾಗಲು ಪ್ರೇರಣೆಯಾಗಿದ್ದು ಒಬ್ಬರು ನಿವೃತ್ತ ಆರ್ಮಿ ಕರ್ನಲ್.

ಪೈಥಾನೆ ಪುಣೆಯ ಟೊಂಡಲ್ ಅನ್ನೋ ಹಳ್ಳಿಯಲ್ಲಿ ಜನಿಸಿದವರು. ರಸ್ತೆ ಅಪಘಾತದಲ್ಲಿ ತಂದೆ ಎರಡೂ ಕಾಲುಗಳನ್ನು ಕಳೆದುಕೊಂಡ ಬಳಿಕ ಬಿಎಸ್ಸಿ ಓದುತ್ತಲೇ ಜೀವನೋಪಾಯಕ್ಕಾಗಿ ಓಲಾ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ಒಮ್ಮೆನಿವೃತ್ತ ಆರ್ಮಿ ಕರ್ನಲ್  ಒಬ್ಬರು ಪೈಥಾನೆ ಅವರ ಕ್ಯಾಬ್ ಬುಕ್ ಮಾಡಿದ್ದರು. ದಾರಿಯುದ್ದಕ್ಕೂ ಮಾತನಾಡುತ್ತಿದ್ದ ಆ ವ್ಯಕ್ತಿ ತನಗೆ ಸೇನೆಯಲ್ಲಿರುವ ಅವಕಾಶಗಳ ಬಗ್ಗೆ, ಮಹತ್ವದ ಬಗ್ಗೆ ಹೇಳಿದರು. ಇದಾದ ಬಳಿಕ 2016ರಲ್ಲಿ ಎಸ್ ಎಸ್ ಬಿ ಪರೀಕ್ಷೆ ಕಟ್ಟಿದ ತಾನು ಮೊದಲ ಪ್ರಯತ್ನದಲ್ಲೇ ಪಾಸಾದೆ ಎಂದಿದ್ದಾರೆ ಪೈಥಾನೆ. ಇದೀಗ ಸೇನೆ ಸೇರಿ ದೇಶದ ರಕ್ಷಣೆಗೆ ಪಣ ತೊಟ್ಟಿರುವುದಾಗಿ ಪೈಥಾನೆ ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...