alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಗೆ ಬಂದ ಬಾಲಕನ ಬ್ಯಾಗ್ ನಲ್ಲಿತ್ತು ಇಷ್ಟೊಂದು ಹಣ..!

ratlam_child_2017622_191654_22_06_2017

ಮಧ್ಯಪ್ರದೇಶದ ರತ್ಲಂನ ಪೊಲೀಸ್ ಠಾಣೆ ಸಿಬ್ಬಂದಿ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕನೊಬ್ಬ ಬ್ಯಾಗ್ ನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಬ್ಯಾಗ್ ಮಾಲೀಕರಿಗೆ ಇದನ್ನು ಒಪ್ಪಿಸಿ ಎಂದು ಬಾಲಕ ಪೊಲೀಸರಿಗೆ ಹೇಳಿದ್ದಾನೆ. ಬಾಲಕ ತಂದ ಬ್ಯಾಗ್ ನಲ್ಲಿದ್ದ ವಸ್ತು ನೋಡಿ ಪೊಲೀಸರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಬಾಲಕ ತಂದ ಬ್ಯಾಗ್ ನಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಣ್ಯವಿದೆ. ಇದನ್ನು ನೋಡಿದ ಪೊಲೀಸರು ಬಾಲಕನನ್ನು ವಿಚಾರಿಸಿದ್ದಾರೆ. ಮೂಲತಃ ಜಬುವಾ ಜಿಲ್ಲೆಯ ಈ ಬಾಲಕ ಮೂರನೇ ಕ್ಲಾಸ್ ನಲ್ಲಿ ಓದುತ್ತಿದ್ದಾನೆ. ಜನವರಿ 21ರಂದು ಗುಜರಾತ್ ನ ಅಹಮದಾಬಾದ್ ಗೆ ತೆರಳಿದ್ದಾನೆ. ಅಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿದ್ದಾನೆ. ನಂತ್ರ ಆತನಿಗೆ ಲಾರಿ ಚಾಲಕನ ಪರಿಚಯವಾಗಿದೆ. ಆತನ ಜೊತೆ ನಾಗ್ಪುರಕ್ಕೆ ಬಂದ ಬಾಲಕ ಅಲ್ಲಿ ಕೆಲಸ ಶುರುಮಾಡಿದ್ದಾನೆ.

ಎರಡು ತಿಂಗಳು ಕೆಲಸ ಮಾಡಿದ್ರೂ ತಿಂಗಳ ಸಂಬಳ ಆತನ ಕೈ ಸೇರಲಿಲ್ಲ. ಜೂನ್ 17ರಂದು ಅಲ್ಲಿ ಕೆಲಸ ಮಾಡ್ತಿದ್ದ ಲಾರಿ ಚಾಲಕ ಪ್ರೇಮ್ ಎಂಬಾತ ಒಂದು ಲಕ್ಷದ 12 ಸಾವಿರದ 300 ರೂಪಾಯಿಯನ್ನು ಹುಡುಗನ ಕೈಗೆ ನೀಡಿ ಅಲ್ಲಿಂದ ಕಳುಹಿಸಿದ್ದಾನೆ. ರೂಪಾಯಿ ಬ್ಯಾಗ್ ಹಿಡಿದ ಬಾಲಕ ಇಂದೋರ್ ಗೆ ಬಂದು ಅಲ್ಲಿಂದ ರತ್ಲಂಗೆ ಬಂದಿದ್ದಾನೆ.

ಬಾಲಕರ ಕುಟುಂಬಸ್ಥರು ಹಣ ಬೇಡ. ಅದನ್ನು ನೀನು ಕೆಲಸ ಮಾಡ್ತಿದ್ದ ಮಾಲೀಕನಿಗೆ ವಾಪಸ್ ಮಾಡು ಎಂದಿದ್ದಾರೆ. ಹಾಗಾಗಿ ಹಣ ಹಿಡಿದು ಠಾಣೆಗೆ ಬಂದಿದ್ದಾನೆ ಬಾಲಕ. ಸದ್ಯ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೆ ನೀಡಲಾಗಿದೆ. ಅಲ್ಲಿ ಬಾಲಕನಿಂದ ಇನ್ನಷ್ಟು ಮಾಹಿತಿ ಪಡೆಯಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...