alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ವಿಳಂಬವಾಗಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ..?

Hoax-call-ರೈಲು ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಏನೇ ಪ್ರಯತ್ನ ಮಾಡಿದರೂ ಅದಿನ್ನೂ ಸಾಧ್ಯವಾಗಿಲ್ಲ. ಪ್ರತಿ ನಿತ್ಯ ರೈಲು ವಿಳಂಬವಾಗಿ ಬರುತ್ತಿದ್ದ ಕಾರಣ ರೊಚ್ಚಿಗೆದ್ದ ಅನಾಮಧೇಯ ಪ್ರಯಾಣಿಕನೊಬ್ಬ ಏನು ಮಾಡಿದ್ದಾನೆ ಗೊತ್ತಾ..? ಮುಂದೆ ಓದಿ.

ಅಂಬರ್ ನಾಥ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬ ಪ್ರತಿ ನಿತ್ಯ ಖೋಪೊಲಿ- ಸಿ ಎಸ್ ಟಿ, ರೈಲಿನಲ್ಲಿ ಕೆಲಸಕ್ಕಾಗಿ ತೆರಳುತ್ತಿದ್ದನೆನ್ನಲಾಗಿದೆ. ಆದರೆ ನಿತ್ಯವೂ ಈ ರೈಲು ವಿಳಂಬವಾಗುತ್ತಿದ್ದ ಕಾರಣ ರೊಚ್ಚಿಗೆದ್ದು, ಇಂದು ಬೆಳಿಗ್ಗೆ 9-15 ರ ಸುಮಾರಿಗೆ ಅಂಬರ್ ನಾಥ್ ಸ್ಟೇಷನ್ ಮಾಸ್ಟರ್ ಕಛೇರಿಗೆ ಕರೆ ಮಾಡಿದ್ದಾನೆ.

ಮೊದಲಿಗೆ ಸಹಾಯಕ ಫೋನ್ ಎತ್ತಿದಾಗ ಆತನಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. ಸಹಾಯಕ, ಸ್ಟೇಷನ್ ಮಾಸ್ಟರ್ ಗೆ ಫೋನ್ ಕೊಟ್ಟಿದ್ದು, ಅವರಿಗೂ ಒಂದಷ್ಟು ಮಂಗಳಾರತಿ ಮಾಡಿದ ಪ್ರಯಾಣಿಕ, ನಿತ್ಯವೂ ತಾನು ಕಛೇರಿಗೆ ಲೇಟಾಗಿ ಹೋಗುವ ಕಾರಣಕ್ಕಾಗಿ ಮೇಲಾಧಿಕಾರಿಗಳಿಂದ ಬೈಸಿಕೊಳ್ಳಬೇಕಾಗಿ ಬಂದಿದೆ ಎಂದಿದ್ದಲ್ಲದೇ ನಿಲ್ದಾಣವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕಂಗಾಲಾದ ಸ್ಟೇಷನ್ ಮಾಸ್ಟರ್, ಭದ್ರತಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದು, ಎರಡು ಗಂಟೆಗಳ ಕಾಲ ನಿಲ್ದಾಣ ಹುಡುಕಾಡಿದರೂ ಬಾಂಬ್ ಸಿಕ್ಕಿಲ್ಲ. ಬಳಿಕ ಇದೊಂದು ಹುಸಿ ಕರೆ ಎಂದು ಮನವರಿಕೆಯಾಗಿದ್ದು, ಕರೆ ಮಾಡಿದವರ ಬಂಧನಕ್ಕಾಗಿ ತನಿಖೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...