alex Certify
ಕನ್ನಡ ದುನಿಯಾ       Mobile App
       

Kannada Duniya

ಗಣರಾಜ್ಯೋತ್ಸವದಂದು ವಿಧ್ವಂಸಕ ಕೃತ್ಯಕ್ಕೆ ‘ಉಗ್ರ’ ಸಂಚು

pets

ಸಭೆ ಸಮಾರಂಭಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ಪ್ರಮುಖ ಕಾರ್ಯಕ್ರಮಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಹೊಂಚು ಹಾಕಿ ಕೂತಿರ್ತಾರೆ. ಈ ಬಾರಿ ಸಾಕು ಪ್ರಾಣಿಗಳ ರೂಪದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಜನವರಿ 26ರ ಗಣರಾಜ್ಯೋತ್ಸವ ಆಚರಣೆ ವೇಳೆ ಸಾಕುಪ್ರಾಣಿಗಳನ್ನು ಆತ್ಮಹತ್ಯಾ ಬಾಂಬರ್ ಗಳನ್ನಾಗಿ ಉಗ್ರರು ಬಳಸಿಕೊಳ್ಳುವ ಸಾಧ್ಯತೆ ಇದೆ ಅಂತಾ ಗುಪ್ತಚರ ಇಲಾಖೆ ಎಚ್ಚರಿಸಿದೆ.

ದೆಹಲಿ, ಮುಂಬೈ ಮತ್ತು ಅಹಮದಾಬಾದ್ ಉಗ್ರರ ಪ್ರಮುಖ ಟಾರ್ಗೆಟ್ ಎನ್ನಲಾಗ್ತಾ ಇದೆ. ಚಳಿಗಾಲವಾಗಿರೋದ್ರಿಂದ ಸ್ವೆಟರ್ ಗಳನ್ನೇ ಸ್ಪೋಟಕ ನಡುವಂಗಿಯನ್ನಾಗಿ ಬಳಸುವ ಸಾಧ್ಯತೆ ಇದೆ ಅಂತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಾಯಿ, ಬೆಕ್ಕು, ಮೊಲಗಳಿಗೆ ಬಾಂಬ್ ಅಳವಡಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಂದು ಬಿಟ್ಟು, ಅವು ಸ್ಥಳ ತಲುಪುತ್ತಿದ್ದಂತೆ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ.

ಇಂತಹ ಕೃತ್ಯಗಳನ್ನು ಮೊದಲು ಮಾಡಿದವರು ಐಸಿಸ್ ಉಗ್ರರು. ಸಿರಿಯಾದಲ್ಲಿ ಕೋಳಿಗಳನ್ನು ಬಳಸಿ ಬಾಂಬ್ ಸ್ಫೋಟಿಸಿದ್ದರು. ಪ್ರಾಣಿಗಳ ದೇಹದೊಳಕ್ಕೆ ಕೂಡ ಬಾಂಬ್ ಗಳನ್ನು ಹುದುಗಿಸಿ ಇಡುವ ಸಾಧ್ಯತೆ ಇದ್ದು, ತೀವ್ರ ನಿಗಾ ವಹಿಸುವಂತೆ ಭಯೋತ್ಪಾದನಾ ನಿಗ್ರಹ ದಳಕ್ಕೆ ಗುಪ್ತಚರ ಇಲಾಖೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...