alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದಕ ಮಗನ ಈ ಮಾತು ಕೇಳಿ ಹೃದಯಾಘಾತಕ್ಕೊಳಗಾಗಿ ತಂದೆ ಸಾವು

ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆಯುತ್ತಿರುವ ಗುಂಡಿತ ದಾಳಿ ಮುಂದುವರೆದಿದೆ. ಮನೆಯಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರ ಮೇಲೆ ಸೇನೆ ದಾಳಿ ನಡೆಸುತ್ತಿದೆ. ಇಬ್ಬರು ಭಯೋತ್ಪಾದಕರು ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ಕು ಮಂದಿ ಗುಂಡಿನ ದಾಳಿ ನಡೆಸುತ್ತಿದ್ದು, ಇದಕ್ಕೆ ಸೇನೆ ತಕ್ಕ ಉತ್ತರ ನೀಡುತ್ತಿದೆ. ದಾಳಿ ನಡೆಸುತ್ತಿರುವ ಭಯೋತ್ಪಾದಕರಲ್ಲಿ ಜೀತನ್ ನಾಯ್ಕ್ ಎಂಬಾತನೂ ಸೇರಿದ್ದಾನೆ.

ಜೀತನ್ ನಾಯ್ಕ್ ಷೋಪಿಯಾದ ಮೆಮಂದರ್ ಗ್ರಾಮದವನು. ಎರಡು ತಿಂಗಳ ಹಿಂದಷ್ಟೇ ಈತ ಭಯೋತ್ಪಾದಕ ಜಗತ್ತಿಗೆ ಕಾಲಿಟ್ಟಿದ್ದಾನೆ. ಮಂಗಳವಾರ ಸೇನೆ ತಮ್ಮನ್ನು ಸುತ್ತುವರೆದಿದೆ. ಜೀವ ಉಳಿಸಿಕೊಳ್ಳೋದು ಕಷ್ಟಸಾಧ್ಯ ಎಂಬುದು ಗೊತ್ತಾಗ್ತಿದ್ದಂತೆ ಜೀತನ್ ನಾಯ್ಕ್ ತಂದೆ ಇಶಾಕ್ ನಾಯ್ಕ್ ಗೆ ಕರೆ ಮಾಡಿದ್ದಾನೆ. ಸೇನೆ ನಮ್ಮನ್ನು ಸುತ್ತುವರೆದಿದೆ. ಗುಂಡಿನ ದಾಳಿ ನಡೆಯುತ್ತಿದೆ. ಜೀವ ಉಳಿಸಿಕೊಳ್ಳೋದು ಕಷ್ಟ. ಇದೇ ನಿಮಗೆ ಮಾಡ್ತಿರುವ ಕೊನೆಯ ಕರೆಯಾಗಬಹುದು ಎಂದಿದ್ದಾನೆ. ಇದನ್ನು ಕೇಳ್ತಿದ್ದಂತೆ ಇಶಾಕ್ ಗೆ ಹೃದಯಾಘಾತವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿ ಇಶಾಕ್ ನಾಯ್ಕ್ ಸಾವನ್ನಪ್ಪಿದ್ದಾನೆ.

ಮಂಗಳವಾರ ಬೆಳಿಗ್ಗೆಯೇ ಎನ್ಕೌಂಟರ್ ಜಾರಿಯಲ್ಲಿದೆ. ಮನೆಯಲ್ಲಿ ಆರರಿಂದ ಏಳು ಮಂದಿ ಭಯೋತ್ಪಾದಕರಿರಬಹುದೆಂದು ಸೇನೆ ಅಂದಾಜಿಸಿದೆ. ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು-ಕಾಶ್ಮೀರದ ಸ್ಪೆಷಲ್ ಪೊಲೀಸ್ ಪಡೆ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...