alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ 15ರ ಮೇಲೆ ಉಗ್ರರ ಕಣ್ಣು

mumbai_attacks

ಮಹಾರಾಷ್ಟ್ರ ಪೊಲೀಸ್ ಕೈಗೆ ಬೆದರಿಕೆಯ ಪತ್ರವೊಂದು ಸಿಕ್ಕಿದೆ. ಇದ್ರಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ಸ್ಫೋಟಗೊಳಿಸುವುದಾಗಿ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಪತ್ರ ಕೈ ಸೇರುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಪತ್ರ ಬರೆದವರು ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದ್ರೆ ಭದ್ರತಾ ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ಬೆದರಿಕೆ ಪತ್ರವನ್ನು ಮಹಾರಾಷ್ಟ್ರದ ಡಿಜಿಪಿಗೆ ಕಳುಹಿಸಲಾಗಿದೆ. ಇದ್ರಲ್ಲಿ ಆಗಸ್ಟ್ 15 ಮತ್ತು 16ರಂದು ಪುಣೆ ಹಾಗೂ ಮುಂಬೈನಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.

ಪೊಲೀಸ್ ಸೇರಿದಂತೆ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಸ್ವಾತಂತ್ರ್ಯ ದಿವಸದಂದು ಬಾಂಬ್ ಸ್ಫೋಟ ನಡೆಸುವ ಸಾಧ್ಯತೆಯಿರುವುದರಿಂದ ಮತ್ತಷ್ಟು ಭದ್ರತೆಗಳನ್ನು ಕೈಗೊಳ್ಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...