alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ರೈಲು ನಿಲ್ದಾಣದಲ್ಲಿ ನಡೆಯಿತು ಮತ್ತೊಂದು ಘೋರ ದುರಂತ

mancrushedtodeath_card_1454227409_502x234

ಅವಸರವೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಿದ್ದರೂ ಕೆಲವರು ಆ ಕುರಿತು ಯೋಚಿಸದೆ ಅನಾಹುತ ಮಾಡಿಕೊಳ್ಳುತ್ತಾರೆ. ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಮಹಿಳೆಯೊಬ್ಬರು ದುರಂತ ಸಾವಿಗೀಡಾದ ಘಟನೆಯನ್ನು ‘ಕನ್ನಡ ದುನಿಯಾ’ ದಲ್ಲಿ ನೋಡಿದ್ದೀರಿ. ಈಗ ಮತ್ತೊಂದು ಅಂತಹುದೇ ಘಟನೆ ನಡೆದಿದೆ.

ವಾರದ ಹಿಂದೆ ಬೊರಿವಿಲಿ ರೈಲು ನಿಲ್ದಾಣದಲ್ಲಿ ವಡೋದರಾ ಎಕ್ಸ್ ಪ್ರೆಸ್ ರೈಲಿನಿಂದ ಮಹಿಳೆಯೊಬ್ಬರು ಇಳಿಯುವ ವೇಳೆ ಮುಗ್ಗರಿಸಿ ಬಿದ್ದು ನೋಡನೋಡುತ್ತಿದ್ದಂತೆಯೇ ರೈಲಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಈ ದುರಂತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರು ಮಹಿಳೆಯ ಸಾವಿಗೆ ಮಮ್ಮಲ ಮರುಗಿದ್ದರು. ಈ ಬಾರಿ ಮತ್ತೊಂದು ದುರಂತ ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಅತ್ಯಂತ ಜನಸಂದಣಿಯಿಂದ ಕೂಡಿರುವ ದಾದರ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ಟ್ರೈನ್ ಹತ್ತಲು ಹೋದ ವ್ಯಕ್ತಿಯೊಬ್ಬರು ರೈಲಿನ ಚಕ್ರಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಈ ದುರಂತದ ದೃಶ್ಯ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿಯಾದರೂ ಪ್ರಯಾಣಿಕರು ಜಾಗ್ರತೆ ವಹಿಸುವುದು ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...