alex Certify
ಕನ್ನಡ ದುನಿಯಾ       Mobile App
       

Kannada Duniya

ಒಡಿಶಾದಲ್ಲಿ ಸಿಗ್ತು 10 ಕತ್ತರಿಸಿದ ಕೈ…!

ಒಡಿಶಾದಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ಜಾಜ್ಪುರದಲ್ಲಿ ಕತ್ತರಿಸಿದ 10 ಕೈಗಳು ಮೆಡಿಕಲ್ ಬಾಕ್ಸ್ ನಲ್ಲಿ ಸಿಕ್ಕಿವೆ. ಪರಿಸ್ಥಿತಿ ಅರಿತಿರುವ ಪೊಲೀಸರು ಬಿಗಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದ್ದಾರೆ. 2016 ರಲ್ಲಿ ಆದಿವಾಸಿಗಳ ಮೇಲೆ ನಡೆದ ಫೈರಿಂಗ್ ನಲ್ಲಿ ಸತ್ತವರ ಕೈ ಇದಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

2016 ರಲ್ಲಿ ಆದಿವಾಸಿಗಳು ಮತ್ತು ಪೊಲೀಸರ ಮಧ್ಯೆ ಫೈರಿಂಗ್ ನಡೆದಿತ್ತು. ಘಟನೆಯಲ್ಲಿ 13 ಮಂದಿ ಆದಿವಾಸಿಗಳು ಸಾವನ್ನಪ್ಪಿದ್ದರು. ಅದ್ರಲ್ಲಿ 10 ಮಂದಿ ಗುರುತು ಪತ್ತೆಯಾಗಿರಲಿಲ್ಲ. ಕೈ ಗುರುತು ಪಡೆಯಲು ವೈದ್ಯರು ಕೈಗಳನ್ನು ಕತ್ತರಿಸಿಟ್ಟಿದ್ದರು. ಎರಡು ವರ್ಷಗಳ ಹಿಂದೆ ಕೈಗಳನ್ನು ಸಂಬಂಧಿಕರಿಗೆ ನೀಡಿದ್ದರು. ಡಿಎನ್ಎ ಪರೀಕ್ಷೆಗೆ ಒತ್ತಾಯ ಮಾಡಿದ್ದ ಸಂಬಂಧಿಕರು ಕೈಗಳನ್ನು ಸ್ವೀಕರಿಸಿರಲಿಲ್ಲ.

ವೈದ್ಯರು ವೈದ್ಯಕೀಯ ಬಾಕ್ಸ್ ನಲ್ಲಿ ಕತ್ತರಿಸಿದ ಕೈಗಳನ್ನು ಸುರಕ್ಷಿತವಾಗಿಟ್ಟಿದ್ದರು. ಭಾನುವಾರ ಕೈಗಳಿಟ್ಟ ಬಾಕ್ಸ್ ಕಳ್ಳತನವಾಗಿತ್ತು. ಕಿಟಕಿ ಮುರಿದು ಒಳನುಗ್ಗಿದ ವ್ಯಕ್ತಿ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದ. ಜಾಜ್ಪುರದಲ್ಲಿ ಶಾಂತಿ ಕದಡುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದೇ ಕಾರಣಕ್ಕೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...