alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಷಯದಲ್ಲಿ ಹಿಂದೆ ಬಿದ್ದ ತೆಂಡೂಲ್ಕರ್

tendulkar

ಮೈದಾನದಲ್ಲಿ ಅಬ್ಬರಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಬಾಲಿವುಡ್ ತಾರೆ ರೇಖಾರ ರಾಜ್ಯಸಭೆ ಪ್ರದರ್ಶನ ಉತ್ತಮವಾಗಿಲ್ಲ. ಇಬ್ಬರು ಸದಸ್ಯರು ಅತಿ ಕಡಿಮೆ ದಿನ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿದ್ದಾರೆಂದು ಇ ಪೋರ್ಟಲ್ ಒಂದು ಮಾಡಿದ ವಿಶ್ಲೇಷಣಾ ವರದಿಯಲ್ಲಿ ಬಹಿರಂಗವಾಗಿದೆ.

2012 ರಲ್ಲಿ ನಾಮನಿರ್ದೇಶನಗೊಂಡ ನಂತ್ರ ಸಚಿನ್ ತೆಂಡೂಲ್ಕರ್ 348 ದಿನಗಳಲ್ಲಿ 23 ದಿನ ಹಾಗೂ ನಟಿ ರೇಖಾ 18 ದಿನ ರಾಜ್ಯಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿವರ್ಷ ಒಂದು ಅಧಿವೇಶನದಲ್ಲಿ ಒಂದು ದಿನ ರೇಖಾ ಪಾಲ್ಗೊಳ್ಳುವುದೇ ಅನುಮಾನ. ಸಂಬಳ ಸೇರಿ ಇತರ ಭತ್ಯೆಗಾಗಿ ರೇಖಾಗೆ 65 ಲಕ್ಷ ರೂಪಾಯಿ ಹಾಗೂ ಸಚಿನ್ ತೆಂಡೂಲ್ಕರ್ ಗೆ 58.8 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ರೇಖಾರ ದಿನದ ವೆಚ್ಚ 3,60,000 ರೂಪಾಯಿ. ಹಾಗೆ ಸಚಿನ್ ದಿನದ ವೆಚ್ಚ 2,56,00 ರೂಪಾಯಿ. ಭತ್ಯೆಯ ಕಾರಣದಿಂದಾಗಿ ವೆಚ್ಚದಲ್ಲಿ ಅಂತರವುಂಟಾಗುತ್ತದೆ.

ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ರಾಜ್ಯಸಭೆಯಲ್ಲಿ ಈ ವಿಷಯದ  ಬಗ್ಗೆ ಮಾತನಾಡಿದ್ದಾರೆ. ರೇಖಾ ಹಾಗೂ ಸಚಿನ್ ಬಹಳ ಕಷ್ಟಪಟ್ಟು ರಾಜ್ಯಸಭೆಯಲ್ಲಿ ಪಾಲ್ಗೊಳ್ತಾರೆಂದು ನರೇಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...