alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಾಲಯಗಳಿಗೆ ಹರಿದು ಬರುತ್ತಿದೆ ಅಪಾರ ಹಣ

paddamma

ಹೈದರಾಬಾದ್: ವಿಶ್ವದಲ್ಲಿಯೇ ಅತಿ ಶ್ರೀಮಂತ ಮತ್ತು ಪ್ರಸಿದ್ಧ ದೇವಾಲಯ ತಿರುಪತಿ, ತಿರುಮಲದಲ್ಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯಂತೆಯೇ ಹೈದರಾಬಾದ್ ನಲ್ಲಿ ಅತಿ ಹೆಚ್ಚು ಆದಾಯ ಹೊಂದಿದ ಹಲವು ದೇವಾಲಯಗಳಿದ್ದು, ಅಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ.

ಹೈದರಾಬಾದ್ ಜುಬಿಲಿ ಹಿಲ್ಸ್ ನಲ್ಲಿರುವ 150 ವರ್ಷಗಳಿಂದ ಭಕ್ತರು ನಡೆದುಕೊಳ್ಳುತ್ತಿರುವ ಪೆದ್ದಮ್ಮ ದೇವಾಲಯಕ್ಕೆ ಅತಿಹೆಚ್ಚಿನ ಭಕ್ತರು ಭೇಟಿ ಕೊಡುತ್ತಾರೆ. ಈ ದೇವಾಲಯದ ಆದಾಯ 6 ಕೋಟಿ ರೂ. ಅದೇ ರೀತಿ ಬಲ್ಕಾನ್ ಪೇಟ್ ನಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ 4 ಕೋಟಿ ರೂ. ಆದಾಯವಿದೆ. ಸಿಕಂದರಾಬಾದ್ ರೈಲ್ವೇ ಸ್ಟೇಷನ್ ಬಳಿ ಇರುವ ಗಣಪತಿ ದೇವಾಲಯಕ್ಕೆ 4 ಕೋಟಿ ರೂ. ಆದಾಯ ಇದೆ. ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರದಲ್ಲಿ ಸುಮಾರು 4000 ದೇವಾಲಯಗಳಿವೆ.

ಹೈದರಾಬಾದ್ ನಲ್ಲಿ 771 ಹಾಗೂ ಸಿಕಂದರಾಬಾದ್ ನಲ್ಲಿ 284 ದೇವಾಲಯಗಳು ಮುಜರಾಯಿ ಇಲಾಖೆಯಲ್ಲಿ ನೋಂದಣಿಯಾಗಿವೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಬಜೆಟ್ ಗಿಂತಲೂ ಜಾಸ್ತಿ ಆಯವ್ಯಯ ಈ ದೇವಾಲಯಗಳಲ್ಲಿ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...