alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಿ ಮಾತೆಗೆ ಚೀನಿಯರ ನೈವೇದ್ಯ ಏನು ಗೊತ್ತಾ..?

Chinese_1431060035e11

ಪಶ್ಚಿಮ ಬಂಗಾಳದಲ್ಲಿ ಒಂದು ಕಾಳಿ ದೇವಿಯ ದೇವಸ್ಥಾನವಿದೆ. ಈ ದೇವಿಗೆ ಚೀನಾದ ಎಲ್ಲಾ ಖಾದ್ಯಗಳ ನೈವೇದ್ಯ ಸಲ್ಲುತ್ತದೆ.

ಕೋಲ್ಕತ್ತಾ ನಗರದಿಂದ 12 ಕಿ.ಮೀ. ದೂರದಲ್ಲಿರುವ ಟಾಂಗ್ರಾದಲ್ಲಿನ ಈ ಕಾಳಿ ದೇಗುಲ ಚೀನಿಗರ ನೆಚ್ಚಿನ ತಾಣವಾಗಿದೆ. ಟಾಂಗ್ರಾದಲ್ಲಿ ಹೆಚ್ಚಿನ ಸಂಖ್ಯೆಯ ಚೀನೀಯರಿದ್ದಾರೆ. ಆ ಕಾರಣಕ್ಕಾಗಿಯೇ ಇದನ್ನು ಚೈನಾ ಟೌನ್ ಎಂದೂ ಕರೆಯುತ್ತಾರೆ.

ಈ ದೇಗುಲದ ಕಾಳಿ ದೇವಿಯನ್ನು ಚೀನೀಯರೇ ಪೂಜಿಸುತ್ತಾರೆ. ಹಿಂದೂ ರೀತಿ- ರಿವಾಜಿನ ಮೂಲಕ ದೇವಿಯ ಪೂಜೆ ನಡೆಯುತ್ತದೆ. ಆದರೆ ನೈವೇದ್ಯಕ್ಕೆ ಮಾತ್ರ ಚೀನಾದ ಖಾದ್ಯಗಳು ಇರುತ್ತವೆ. ಚೀನೀಯರು ತಾವು ತಿನ್ನುವ ನೂಡಲ್ಸ್, ಚಪಾತಿ, ತರಕಾರಿಯ ಅಡಿಗೆ ಮುಂತಾದವುಗಳನ್ನೇ ದೇವಿಗೆ ನೈವೇದ್ಯವಾಗಿ ಇಡುತ್ತಾರೆ.

ಮೊದಲು ಇಲ್ಲಿ ಯಾವುದೇ ಗುಡಿ ಇರಲಿಲ್ಲ. ಕೆಲವು ಮೂರ್ತಿರೂಪದ ಕಲ್ಲುಗಳು ಮಾತ್ರ ಇದ್ದವು. ಜನ ಅದನ್ನೇ ದೇವಿಯೆಂದು ಪೂಜಿಸುತ್ತಿದ್ದರು. ಒಮ್ಮೆ ಒಬ್ಬ ಚೀನೀ ಹುಡುಗನ ಆರೋಗ್ಯ ತೀರಾ ಹದಗೆಟ್ಟಿತ್ತು. ಯಾವ ವೈದ್ಯರ ಚಿಕಿತ್ಸೆಯೂ ಫಲಿಸಲಿಲ್ಲ. ಕೊನೆಗೆ ಹುಡುಗನ ಹೆತ್ತವರು ಸತತ 7 ದಿನಗಳ ಕಾಲ ಕಾಳಿ ದೇವಿಯ ಪೂಜೆ ಮಾಡಿದರು. ಹೀಗೆ ಮಾಡಿದ ಸ್ವಲ್ಪ ದಿನದಲ್ಲೇ ಹುಡುಗನ ಆರೋಗ್ಯ ಸಹಜ ಸ್ಥಿತಿಗೆ ಮರಳಿತು. ಈ ಘಟನೆಯ ನಂತರ ಚೀನೀಯರು ಈ ದೇವಿಗೆ ದೇವಸ್ಥಾನ ನಿರ್ಮಿಸಿ ನಿತ್ಯವೂ ಪೂಜೆ ಮಾಡಲು ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...