alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

cc-ap-guntur

ಹೈದರಾಬಾದ್: ದೇವಾಲಯದ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಭಾರೀ ಗಾತ್ರದ ಕಾಣಿಕೆ ಹುಂಡಿಯನ್ನು ಹೊತ್ತೊಯ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಗುಂಟೂರು ಜಿಲ್ಲೆಯ ಅಮರಾವತಿ ಮಂಡಲ ವ್ಯಾಪ್ತಿಯ ಮಲ್ಲಾಡಿ ಗ್ರಾಮದಲ್ಲಿರುವ ವೆಂಕಟೇಶ್ವರ ದೇವಾಲಯದ ಹುಂಡಿಯನ್ನು ಕದ್ದೊಯ್ಯಲಾಗಿದೆ. ಭಾರೀ ಗಾತ್ರದ ಹುಂಡಿಯಲ್ಲಿ ಭಾರೀ ಕಾಣಿಕೆ ಹಣ, ಚಿನ್ನ ಸಂಗ್ರಹವಾಗಿತ್ತು. ಮೊದಲಿಗೆ ಒಬ್ಬ ಕಳ್ಳ ಪ್ರವೇಶಿಸಿ, ಹುಂಡಿಯನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗಿಲ್ಲ. ನಂತರ ಇನ್ನೊಬ್ಬ ಕಳ್ಳ ಬಂದರೂ ವಿಫಲ ಯತ್ನವಾಗಿದೆ. ಹೊರಗೆ ನಿಂತಿದ್ದ 3 ನೇ ಕಳ್ಳ ಒಳಗೆ ಬಂದಿದ್ದು, ಮೂವರು ಸೇರಿ ಹುಂಡಿಯನ್ನು ಹೊತ್ತುಕೊಂಡು ಹೋಗಿದ್ದಾರೆ.

ಗ್ರಾಮದ ಹೊರವಲಯದ ಜಮೀನಿನಲ್ಲಿ ಹುಂಡಿಯನ್ನು ಬಿಟ್ಟು ಅದರಲ್ಲಿ ಹಣ, ಚಿನ್ನದ ಸಮೇತ ಪರಾರಿಯಾಗಿದ್ದಾರೆ. ಜಮೀನಿನಲ್ಲಿದ್ದ ದೇವಾಲಯದ ಹುಂಡಿಯನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ಪೊಲೀಸರು, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ದೇವಾಲಯವಿದ್ದು, ರಾತ್ರಿ ಜನ ಸುಳಿದಾಡುವುದಿಲ್ಲ. ದೇವಾಲಯದಲ್ಲಿ ಅಳವಡಿಸಿದ್ದ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಕಳ್ಳರ ಕೃತ್ಯಗಳು ಸೆರೆಯಾಗಿವೆ. ವೃತ್ತಿಪರ ಕಳ್ಳರೇ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...