alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಾದ ರೂಪದಲ್ಲಿ ಸಿಗುತ್ತೆ ಬಂಗಾರದ ಆಭರಣ

temple_money_m_1_26

ದೇವರು ತೃಪ್ತರಾಗಿ ನಮ್ಮ ಬಯಕೆಯನ್ನು ಈಡೇರಿಸಲಿ ಅಂತಾ ದೇವಸ್ಥಾನಕ್ಕೆ ಭಕ್ತರು ಹೋಗ್ತಾರೆ. ದೇವರ ದರ್ಶನ ಸರಿಯಾಗಿ ಆದ್ರೆ ಅದು ಭಕ್ತರಿಗೆ ಖುಷಿ. ದೇವಸ್ಥಾನದಲ್ಲಿ ಇನ್ನೇನು ಸಿಗಲು ಸಾಧ್ಯ. ಕುಂಕುಮ, ಪ್ರಸಾದವನ್ನು ಸ್ವೀಕರಿಸಿ ಭಕ್ತ ಮನೆಗೆ ಬರ್ತಾನೆ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ಪೂಜೆಯಾದ ಬಳಿಕ ಭಕ್ತರಿಗೆ ಬಂಗಾರದ ಆಭರಣ ಹಾಗೂ ನೋಟುಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ಹೌದು, ಇಂತಹದ್ದೊಂದು ದೇವಸ್ಥಾನ ಮಧ್ಯಪ್ರದೇಶದ ರತ್ಲಂನಲ್ಲಿದೆ. ಅಲ್ಲಿನ ಮಹಾಲಕ್ಷ್ಮಿ ಮಂದಿರದಲ್ಲಿ ನೋಟಿನ ಹಾರಗಳನ್ನು ಮಾಡಿ ದೇವಿಗೆ ಅರ್ಪಿಸಲಾಗುತ್ತದೆ. ದೀಪಾವಳಿಗಾಗಿ ಇಲ್ಲಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಬೆಳ್ಳಿಯ ಆನೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಗರ್ಭಗುಡಿಯಿಂದ ಹಿಡಿದು ದೇವಸ್ಥಾನದ ಆವರಣದಲ್ಲಿ ನೋಟಿನ ಹಾರಗಳು ರಾರಾಜಿಸುತ್ತಿವೆ.

10 ರೂಪಾಯಿ ನೋಟಿನಿಂದ ಹಿಡಿದು ಐದು ನೂರು ರೂಪಾಯಿ ನೋಟಿನ ಹಾರಗಳನ್ನು ಮಾಡಲಾಗಿದೆ. ಯಾವ ಭಕ್ತ ಎಷ್ಟು ನೋಟುಗಳನ್ನು ನೀಡಿದ್ದಾರೆಂಬ ವಿವರ  ದೇವಸ್ಥಾನ ಆಡಳಿತ ಮಂಡಳಿ ಬಳಿ ಇರುತ್ತದೆ. ದೀಪಾವಳಿಯಂದು ಪೂಜೆ ಮಾಡಿದ ನಂತ್ರ ಹಣ ಹಾಗೂ ಆಭರಣಗಳನ್ನು ಭಕ್ತರಿಗೆ ಹಿಂದಿರುಗಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...