alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ದೌರ್ಜನ್ಯ ಕೇಸಲ್ಲಿ ಖ್ಯಾತ ಗಾಯಕ ಅರೆಸ್ಟ್

ಹೈದರಾಬಾದ್: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಖ್ಯಾತ ಗಾಯಕ ಗಜಲ್ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

29 ವರ್ಷ ವಯಸ್ಸಿನ ದೂರುದಾರೆ ಶ್ರೀನಿವಾಸ್ ದೀರ್ಘ ಕಾಲದವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಆಲಯವಾಣಿ ವೆಬ್ ರೇಡಿಯೋ ಕಂಪನಿಯ ಪ್ರೋಗ್ರಾಂ ಮುಖ್ಯಸ್ಥರಾಗಿರುವ ಶ್ರೀನಿವಾಸ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳೆ, ಹೈದರಾಬಾದ್ ನ ಪುಂಜಗುಟ್ಟ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಗಜಲ್ ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ.

ಆದರೆ, ಈ ಆರೋಪವನ್ನು ಶ್ರೀನಿವಾಸ್ ಅಲ್ಲಗಳೆದಿದ್ದಾರೆ. ಅವರು 2008 ರಲ್ಲಿ ಮಹಾತ್ಮ ಗಾಂಧಿ ನೆನಪಿನ ಒಂದೇ ಗಾನಗೋಷ್ಠಿಯಲ್ಲಿ 76 ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...