alex Certify
ಕನ್ನಡ ದುನಿಯಾ       Mobile App
       

Kannada Duniya

ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕೊಡಲು ಮುಂದಾದ ಸಂಸದ

mp-kidney

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೂತ್ರಪಿಂಡ ದಾನ ಮಾಡಲು ತೆಲುಗು ದೇಶಂ ಪಕ್ಷದ ಸಂಸದರೊಬ್ಬರು ಮುಂದಾಗಿದ್ದಾರೆ. 73 ವರ್ಷ ವಯಸ್ಸಿನ ನರ್ಸಾರಾವ್ ಪೇಟ್ ಕ್ಷೇತ್ರದ ಸಂಸದ ರಾಯಪತಿ ಸಾಂಬಶಿವ ರಾವ್ ತಮ್ಮ ಒಂದು ಕಿಡ್ನಿಯನ್ನು ಕೊಡುವುದಾಗಿ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.

6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಾಂಬಶಿವ ರಾವ್, ಸುಷ್ಮಾ ಸ್ವರಾಜ್ ಅವರ ಅನಾರೋಗ್ಯದ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸಿದ್ದಾರೆ. ನನ್ನ ಒಂದು ಕಿಡ್ನಿಯನ್ನು ಸ್ವೀಕರಿಸಿದರೆ ಸಂತೋಷವಾಗುತ್ತದೆ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಮ್ಸ್ ನಲ್ಲಿ ಸುಷ್ಮಾಗೆ ಡಯಾಲಿಸಿಸ್ ಮಾಡಲಾಗ್ತಿದ್ದು, ಕಿಡ್ನಿ ಕಸಿ ಮಾಡುವುದು ಅನಿವಾರ್ಯ ಅಂತಾ ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...