alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕ್ರಾಂತಿಗೆ ತೆಲಂಗಾಣ ಸರ್ಕಾರದಿಂದ ಸ್ಪೆಷಲ್ ‘ಗಿಫ್ಟ್’

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿಯನ್ನು ಭಾರಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬದ ಹಿನ್ನಲೆಯಲ್ಲಿ ತೆಲಂಗಾಣ ಸರಕಾರ ಟೋಲ್ ತೆರಿಗೆ ಸಂಗ್ರಹಿಸದೇ ಉಚಿತ ಸೇವೆ ಒದಗಿಸಲು‌ ನಿರ್ಧರಿಸಿದೆ‌.

ಹೈದರಾಬಾದ್‌ನಿಂದ ತಮ್ಮ ಊರುಗಳತ್ತ ಮುಖ ಮಾಡಿರುವ ಅನೇಕರಿಗೆ ಸಿಹಿಸುದ್ದಿ ನೀಡಿರುವ ಸರಕಾರ, ಟೋಲ್ ಸಂಗ್ರಹಿಸುವುದಿಲ್ಲ ಎಂದು ಹೇಳಿದೆ. ತೆಲಂಗಾಣ ಮುಖ್ಯ ಕಾರ್ಯದರ್ಶಿಎಸ್.ಕೆ. ಜೋಶಿ ಅವರು ಈ ಅದೇಶ ಹೊರಡಿಸುವ ಮೂಲಕ, ಸಾವಿರಾರು ಜನರಿಗೆ ಸಂಕ್ರಾಂತಿ ವಿಶೇಷ ರಿಯಾಯಿತಿ ನೀಡಲು ಮುಂದಾಗಿದ್ದಾರೆ.

ಹಬ್ಬಕ್ಕೆಂದು ಹೋಗಿ ಬರುವವರು ಹೆಚ್ಚಾದಾಗ ಟೋಲ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಪ್ರಮುಖವಾಗಿ ಹೈದರಾಬಾದ್ – ವಿಜಯವಾಡ, ಹೈದರಾಬಾದ್ – ವಾರಂಗಲ್ ಹೆದ್ದಾರಿಗಳಲ್ಲಿ ಗಂಟೆಗಟ್ಟಲೆ ಕಾಯಬೇಕಿದೆ. ಇದನ್ನು ತಪ್ಪಿಸುವುದಕ್ಕೆ ಈ‌ ಅದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...