alex Certify
ಕನ್ನಡ ದುನಿಯಾ       Mobile App
       

Kannada Duniya

ಹೂವು ತರಲು ಹೋದವಳ ಮೇಲೆ ಅತ್ಯಾಚಾರ

telang

ವಾರಂಗಲ್: ತೆಲಂಗಾಣದ ಜಯಶಂಕರ್ ಭೂಪಾಲ್ ಪಲ್ಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಮಾನವೀಯ ಕೃತ್ಯ ಎಸಗಿದ್ದಾರೆ.

ಕಾಡಿಗೆ ತೆರಳಿದ್ದ ಬುಡಕಟ್ಟು ಮಹಿಳೆಯನ್ನು ಓಡಿಸಿಕೊಂಡು ಹೋದ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ತಾದ್ವಿ ಮಂಡಲ್ ನ ಭೈಯಕ್ಕಪೇಟ್ ಗ್ರಾಮದ 22 ವರ್ಷದ ಸಂತ್ರಸ್ಥೆ ಇನ್ನಿಬ್ಬರು ಮಹಿಳೆಯರೊಂದಿಗೆ ಮಾಹುವಾ ಹೂವು ತರಲು ಕಾಡಿಗೆ ಹೋಗಿದ್ದಾಳೆ.

ಈ ಸಂದರ್ಭದಲ್ಲಿ ಕಾಡಿನಲ್ಲಿದ್ದ ಅರಣ್ಯ ಇಲಾಖೆಯ ಇಬ್ಬರು ಗುತ್ತಿಗೆ ಕಾರ್ಮಿಕರು ಮೂವರು ಮಹಿಳೆಯರನ್ನು ಬೆದರಿಸಿದ್ದಾರೆ.

ಅವರಿಂದ ತಪ್ಪಿಸಿಕೊಂಡು ಬರುವಾಗ ಇಬ್ಬರು ಪರಾರಿಯಾಗಿ ಸಂತ್ರಸ್ಥೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆಯರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರ ಎಸಗಿದ್ದ ಕಾಮುಕರನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...