alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳವೆ ಬಾವಿಗೆ ಬಿದ್ದ 16 ತಿಂಗಳ ಕಂದಮ್ಮ

bore

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಎಂಬಲ್ಲಿ 16 ತಿಂಗಳ ಮಗುವೊಂದು 50 ಅಡಿ ಆಳದ ಕೊಳವೆಬಾವಿಗೆ ಬಿದ್ದಿದೆ. ಯಡಯ್ಯ ಹಾಗೂ ರೇಣುಕಾ ದಂಪತಿ ಮಗುವನ್ನು ಹೊಲಕ್ಕೆ ಕರೆದುಕೊಂಡು ಬಂದಿದ್ರು. ಅವರು ಕೆಲಸದಲ್ಲಿ ಬ್ಯುಸಿಯಾಗಿದ್ದಿದ್ರಿಂದ ಮಗುವಿನ ಕಡೆಗೆ ಗಮನಕೊಟ್ಟಿಲ್ಲ.

ಆಟವಾಡುತ್ತಿದ್ದ ಚಿನ್ನಾರಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದೆ. ಮಗುವಿನ ಸಹೋದರಿ ಇದನ್ನು ನೋಡಿ ಕೂಗಿಕೊಂಡಿದ್ದಾಳೆ. ಕೊನೆಗೆ ಪೋಷಕರು ಕೂಡ ಸ್ಥಳಕ್ಕೆ ಧಾವಿಸಿ ಬಂದ್ರು. ಈಗಾಗ್ಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಖಾರ್ಯ ಆರಂಭಿಸಿದ್ದಾರೆ.

ಮಗುವಿನ ಹೆತ್ತವರು ಮಲ್ಲಾರೆಡ್ಡಿ ಎಂಬುವವರ ಹೊಲದಲ್ಲಿ ಕೆಲಸ ಮಾಡುತ್ತಿದ್ರು. ಅಲ್ಲೇ ಚಿಕ್ಕ ಗುಡಿಸಲೊಂದನ್ನು ಕಟ್ಟಿಕೊಂಡು ವಾಸ ಮಾಡ್ತಾ ಇದ್ರು. ಹೊಲದಲ್ಲಿ ಕೊಳವೆ ಬಾವಿ ಕೊರೆಸಿದ್ದ ಮಲ್ಲಾರೆಡ್ಡಿ ಅದನ್ನು ಮುಚ್ಚಿಸದೇ ಇದ್ದಿದ್ರಿಂದ ಈ ದುರಂತ ಸಂಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...