alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎ. ಪರೀಕ್ಷೆ ಪಾಸ್ ಮಾಡಿದ್ದಾನೆ 11 ವರ್ಷದ ಬಾಲಕ

ಅಗಸ್ತ್ಯ ಜೈಸ್ವಾಲ್ 11 ವರ್ಷದ ಬುದ್ಧಿವಂತ ಬಾಲಕ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮದಲ್ಲಿ ಬಿ.ಎ ಮೊದಲ ವರ್ಷದ ಪರೀಕ್ಷೆ ಪಾಸು ಮಾಡಿದ್ದಾನೆ. ಅಗಸ್ತ್ಯ ಯುಸೂಫ್ ಗಢದ ಸೇಂಟ್ ಮೇರೀಸ್ ಕಾಲೇಜಿನ ವಿದ್ಯಾರ್ಥಿ.

ತೆಲಂಗಾಣದಲ್ಲಿ 11ನೇ ವರ್ಷಕ್ಕೆ ಬಿ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮೊದಲಿಗ. 9ನೇ ವರ್ಷದಲ್ಲೇ ಅಗಸ್ತ್ಯ ಎಸ್ ಎಸ್ ಎಲ್ ಸಿ ಮುಗಿಸಿದ್ದ. ನಂತರ ಶೇ.63ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲೂ ತೇರ್ಗಡೆಯಾಗಿದ್ದಾನೆ.

ಅಗಸ್ತ್ಯ, ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಸಹೋದರ. ತಮ್ಮನ ಫಲಿತಾಂಶ ಬರ್ತಿದ್ದಂತೆ ನೈನಾ ಮತ್ತವಳ ಹೆತ್ತವರು ಸಂಭ್ರಮಾಚರಣೆ ಮಾಡಿದ್ದಾರೆ. ಅಗಸ್ತ್ಯ ಪ್ರತಿದಿನ 3-5 ಗಂಟೆ ಟೇಬಲ್ ಟೆನಿಸ್ ಆಡ್ತಾನಂತೆ.

ರಜಾ ದಿನಗಳಲ್ಲಿ ಮಾತ್ರ ಓದಿಕೊಳ್ತಾನೆ. ಸಹೋದರಿ ನೈನಾ 13ನೇ ವರ್ಷಕ್ಕೆ ಪತ್ರಿಕೋದ್ಯಮ ಬಿ.ಎ. ಪಾಸ್ ಮಾಡಿದ್ಲು. ಆ ದಾಖಲೆಯನ್ನು ಅಗಸ್ತ್ಯ ಮುರಿದಿದ್ದಾನೆ. ಮಗನ ಸಾಧನೆಗೆ ಪ್ರೋತ್ಸಾಹಿಸ್ತಿರೋ ಪೋಷಕರು, ಆತನನ್ನು ಸ್ಮಾರ್ಟ್ ಫೋನ್ ನಿಂದ ದೂರವಿಟ್ಟಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...