alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳಿಂದ ಪಾರಾಗಲು ವ್ಯಾನ್ ನಿಂದ ಹಾರಿದ ಗರ್ಭಿಣಿ

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಅತ್ಯಾಚಾರಿಗಳಿಂದ ಪಾರಾಗಲು ಗರ್ಭಿಣಿಯೊಬ್ಳು ಚಲಿಸುತ್ತಿರುವ ವಾಹನದಿಂದ ಕೆಳಕ್ಕೆ ಹಾರಿ ಮೃತಪಟ್ಟಿದ್ದಾಳೆ. ಆಕೆ 7 ತಿಂಗಳ ಗರ್ಭಿಣಿಯಾಗಿದ್ಲು.

ಕಲಾವತಿ ಎಂಬ ಮಹಿಳೆ ಬಟ್ಟೆ ಮಾರಿ ಜೀವನ ಸಾಗಿಸುತ್ತಿದ್ಲು. ಶನಿವಾರ ಕೊಂಪಲ್ಲಿಯಿಂದ ಮಗಳ ಜೊತೆಗೆ ವಾಪಸ್ ಹೊರಟಿದ್ದಾಳೆ. ಸರ್ಕಾರಿ ಬಸ್ ಮಿಸ್ಸಾಗಿದ್ರಿಂದ ಇಬ್ಬರೂ ಖಾಸಗಿ ವಾಹನ ಏರಿದ್ದಾರೆ. ಸ್ವಲ್ಪ ದೂರ ಬಂದ ಮೇಲೆ ಟೋಲ್ ಹಣ ಕೊಡುವಂತೆ ವ್ಯಾನ್ ಚಾಲಕ ಕಲಾವತಿಗೆ ಸೂಚಿಸಿದ್ದಾನೆ.

ಕಲಾವತಿ ನಿರಾಕರಿಸಿದ್ದರಿಂದ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಅವಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ಗರ್ಭಿಣಿ ಚಲಿಸ್ತಾ ಇರೋ ವ್ಯಾನ್ ನಿಂದ ಕೆಳಕ್ಕೆ ಹಾರಿದ್ದಾಳೆ. ನಂತರ ಬಾಲಕಿಯನ್ನು ಕೂಡ ಕೆಳಕ್ಕೆ ಬಿಸಾಡಿ, ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ.

7 ತಿಂಗಳ ಗರ್ಭಿಣಿಯಾಗಿದ್ದ ಕಲಾವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಿಂದ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಚಾಲಕ ಮತ್ತು ಕ್ಲೀನರ್ ಗಾಗಿ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...