alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಲೇಡಿ ಪೊಲೀಸ್ ಮಸಾಜ್ ವಿಡಿಯೋ

ಹೈದರಾಬಾದ್: ತೆಲಂಗಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಲೇಡಿ ಪೊಲೀಸ್ ಠಾಣೆಯಲ್ಲಿಯೇ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ.

ಸಮವಸ್ತ್ರ ತೆಗೆದಿರುವ ಅಧಿಕಾರಿ ಮಲಗಿದ್ದು, ಆತನಿಗೆ ಲೇಡಿ ಪೊಲೀಸ್ ಮಸಾಜ್ ಮಾಡಿದ್ದಾರೆ. ಖಾಕಿ ಸಮವಸ್ತ್ರದಲ್ಲಿ ಮಸಾಜ್ ಮಾಡುತ್ತಿರುವ ಮಹಿಳೆಯನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಎಂದು ಗುರುತಿಸಲಾಗಿದೆ.

ಮಸಾಜ್ ಮಾಡಿಸಿಕೊಂಡ ಅಧಿಕಾರಿ ಗಡ್ವಾಲ್ ನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಹಾಸನ್ ಎಂದು ತಿಳಿದು ಬಂದಿದ್ದು, ಘಟನೆ ಗಮನಕ್ಕೆ ಬರುತ್ತಲೇ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹೈದರಾಬಾದ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗೃಹ ರಕ್ಷಕ ದಳದ ಪುರುಷ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡು ಅಮಾನತಾಗಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...