alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂಪಾಯಿ ಕೊಟ್ರೆ ನಿಮಗೆ ಜೈಲು ವಾಸ

500 JAILಜೈಲು ಅಂದಾಕ್ಷಣ ಕೆಲವರಿಗೆ ಭಯ ಇನ್ನು ಕೆಲವರಿಗೆ ಕುತೂಹಲ. ಖೈದಿಗಳು ಅಲ್ಲಿ ಹೇಗಿರ್ತಾರೆ, ಹೇಗೆ ದಿನ ಕಳೀತಾರೆ, ಖದೀಮರಿಗೆ ತಕ್ಕ ಪಾಠ ಕಲಿಸ್ತಾರಾ ಅಲ್ಲಿ ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತದೆ.

ನೀವು ಕೂಡ ಒಂದು ದಿನ ಜೈಲಲ್ಲಿ ಕಳೆಯಬಹುದು, ಅದಕ್ಕಾಗಿ ಯಾವುದೇ ಅಪರಾಧ ಮಾಡಬೇಕಾಗಿಲ್ಲ. ಜಸ್ಟ್ 500 ರೂಪಾಯಿ ಕೊಟ್ರೆ ಸಾಕು. ಹೌದು ತೆಲಂಗಾಣದ ಮೇಧಕ್ ಜಿಲ್ಲೆಯಲ್ಲಿರುವ ಸಂಗಾರೆಡ್ಡಿ ಜೈಲಿನಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ಅವಕಾಶವಿದೆ.

500 ರೂಪಾಯಿ ಪಾವತಿಸಿ ಒಂದು ದಿನ ಉಳಿದು ಖೈದಿಗಳ ಅನುಭವ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳಬಹುದು. 220 ವರ್ಷ ಹಳೆಯ ಈ ಜೈಲನ್ನು ಮ್ಯೂಸಿಯಂ ಆಗಿ ಬದಲಾಯಿಸಲಾಗಿದೆ. ಇಲ್ಲಿ ಉಳಿದುಕೊಳ್ಳಲು ಇಷ್ಟಪಡುವ ಪ್ರವಾಸಿಗರಿಗಾಗಿ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ. ಖೈದಿಗಳ ಬಿಳಿ ಸಮವಸ್ತ್ರ, ಸ್ಟೀಲ್ ಲೋಟ, ತಟ್ಟೆ, ಖೈದಿಗಳಿಗೆ ಕೊಡುವಂತಹ ಊಟ ಎಲ್ಲವೂ ಇಲ್ಲಿದೆ.

ವಿಪರ್ಯಾಸ ಅಂದ್ರೆ ಇದುವರೆಗೆ ಯಾವೊಬ್ಬ ಪ್ರವಾಸಿಗರೂ ಈ ಆಫರ್ ಅನ್ನು ಬಳಸಿಕೊಂಡಿಲ್ವಂತೆ. 500 ರೂಪಾಯಿ ಕೊಟ್ಟು ಒಂದು ದಿನದ ಜೈಲಿನ ಅನುಭವಕ್ಕಾಗಿ ಉಳಿದುಕೊಳ್ಳುವ ಪ್ರವಾಸಿಗರು ಸುಮ್ಮನೆ ಕೂರುವಂತಿಲ್ಲ. ಖೈದಿಗಳು ಮಾಡುವಂತೆ ತಮ್ಮ ಕೋಣೆಯನ್ನು ತಾವೇ ಸ್ವಚ್ಛಗೊಳಿಸಬೇಕು, ಗಿಡಗಳಿಗೆ ಪಾತಿ ಮಾಡಬೇಕು. 3 ಎಕರೆ ವಿಸ್ತಾರವಾದ ಜೈಲು ಆವರಣ ಇದಾಗಿದ್ದು, ಮಹಿಳಾ ಮತ್ತು ಪುರುಷ ಖೈದಿಗಳಿಗೆ ಪ್ರತ್ಯೇಕ ವಿಭಾಗವಿದೆ. ಪ್ರತಿದಿನ 15-20 ಪ್ರವಾಸಿಗರು ಇಲ್ಲಿಗೆ ಬರ್ತಾರೆ, ಆದ್ರೆ ಯಾರೂ ಜೈಲಿನಲ್ಲಿ ಉಳಿಯುವ ಸಾಹಸಕ್ಕೆ ಮುಂದಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...