alex Certify
ಕನ್ನಡ ದುನಿಯಾ       Mobile App
       

Kannada Duniya

50 ಲಕ್ಷದ ಪೂಜೆ ಮಾಡಿದ್ರೂ ಮಂತ್ರಿಯಾಗಿಲ್ಲ ಶಾಸಕರು

pooja

ತೆಲಂಗಾಣದಲ್ಲಿ ಟಿಆರ್ ಎಸ್ ಶಾಸಕನೊಬ್ಬ ಮಂತ್ರಿಗಿರಿ ಸಿಗಲಿ ಅಂತಾ 50 ಲಕ್ಷ ರೂಪಾಯಿ ಖರ್ಚು ಮಾಡಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಅರ್ಚಕರ ಕೈಯಿಂದ ಪೂಜೆ ಮಾಡಿಸಿದ್ರು. ಆದ್ರೆ ಪೂಜೆ ಫಲ ಕೊಟ್ಟಿಲ್ಲ, ಶಾಸಕರಿಗೆ ಮಂತ್ರಿಗಿರಿ ಸಿಕ್ಕಿಲ್ಲ. ಅದೇ ಕೋಪದಲ್ಲಿ ಶಾಸಕರು ಇಬ್ಬರನ್ನೂ ಜೈಲಿಗಟ್ಟಿದ್ದಾರೆ.

ಶಾಸಕರ ಸಂಬಂಧಿಯೊಬ್ಬ ಅರ್ಚಕರನ್ನು ಪರಿಚಯ ಮಾಡಿಸಿದ್ದ. ಅವರಿಗೆ ವಿಶೇಷ ಶಕ್ತಿಯಿದ್ದು, ಅವರು ಮಾಡಿದ ಪೂಜೆಯಿಂದ್ಲೇ ತಮಗೆ ಮಗುವಾಗಿದೆ ಅಂತಾ ತಿಳಿಸಿದ್ದ. ಕೊನೆಗೆ ಶಾಸಕರು ಕೂಡ ಸಚಿವರಾಗೋ ತಮ್ಮ ಆಸೆ ಈಡೇರಿಸಿಕೊಳ್ಳಲು ವಿಶೇಷ ಪೂಜೆ ಮಾಡಿಸಿದ್ದಾರೆ. ಅರ್ಚಕರು ಅದ್ಯಾವುದೋ ಗಿಡಮೂಲಿಕೆ ಬಳಸಿ ಪೂಜೆ ಕೂಡ ಮಾಡಿದ್ದರಂತೆ.

ಅರ್ಚಕರಾದ ನರಸಿಂಹ ಹಾಗೂ ರಾಜು ಇಬ್ಬರೂ ಕರೀಮ್ಬಾದ್ ನಿವಾಸಿಗಳು. ಪೂಜಾ ಸಾಮಗ್ರಿಗೆ ಅಂತಾ ಮೊದಲು 1 ಲಕ್ಷ ತೆಗೆದುಕೊಂಡಿದ್ರು. ನಂತರ ಸುಮಾರು 50 ಲಕ್ಷ ರೂಪಾಯಿ ಪೀಕಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಶಾಸಕರಿಗೆ ತಾವು ಬೇಸ್ತು ಬಿದ್ದಿದ್ದು ಗೊತ್ತಾಗಿದೆ. ಪೊಲೀಸರನ್ನು ಕರೆಸಿ ಇಬ್ಬರನ್ನೂ ಅರೆಸ್ಟ್ ಮಾಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...