alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ಬೆಲೆ ಇಳಿಯುತ್ತಿದ್ದಂತೆ ಪಿಎಂಗೆ 9 ಪೈಸೆ ಚೆಕ್ ನೀಡಿದ ವ್ಯಕ್ತಿ

ತೈಲ ಬೆಲೆಯಲ್ಲಿ ಇಳಿಕೆಯಾಗ್ತಿದೆ. ಆದ್ರೆ ರೂಪಾಯಿ ಲೆಕ್ಕದಲ್ಲಲ್ಲ. ಪೆಟ್ರೋಲ್-ಡಿಸೇಲ್ ಬೆಲೆ ಪೈಸೆ ಲೆಕ್ಕದಲ್ಲಿ ಇಳಿದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ತೆಲಂಗಾಣದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 9 ಪೈಸೆಯನ್ನು ದಾನ ಮಾಡಿದ್ದಾರೆ.

ಸಿರ್ಸಿಲಾ ಜಿಲ್ಲೆಯ ವಿ. ಚಂದ್ರಯ್ಯಾ ಕಾರ್ಯಕ್ರಮವೊಂದರಲ್ಲಿ 9 ಪೈಸೆ ಚೆಕ್ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ನೀವು ತೈಲ ಬೆಲೆಯಲ್ಲಿ 9 ಪೈಸೆ ಇಳಿಕೆ ಮಾಡಿದ್ದೀರಿ. ನಾನು 9 ಪೈಸೆ ಉಳಿಸಿದ್ದೇನೆ. ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಇದು ಒಳ್ಳೆ ಕೆಲಸಕ್ಕೆ ಬಳಕೆಯಾಗಬಹುದೆಂಬ ವಿಶ್ವಾಸವಿದೆ ಎಂದು ಚಂದ್ರಯ್ಯಾ ಹೇಳಿದ್ದಾರೆ.

ಮಂಗಳವಾರ ಪೆಟ್ರೋಲ್ ಬೆಲೆ 13 ಪೈಸೆ ಹಾಗೂ ಡಿಸೇಲ್ ಬೆಲೆ 9 ಪೈಸೆ ಇಳಿಕೆಯಾಗಿದೆ. ಸತತ ಏಳು ದಿನಗಳಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗ್ತಿದೆ. ಆದ್ರೆ ಪೈಸೆ ಲೆಕ್ಕದಲ್ಲಿ ಆಗ್ತಿರುವ ಇಳಿಕೆ ಸವಾರರ ಕೋಪಕ್ಕೆ ಕಾರಣವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...