alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಬಂದ ಅತಿಥಿಗಳಿಗೆ ಸಿಕ್ಕಿದೆ ಇಂತಹ ಫುಡ್

ಹೈದರಾಬಾದ್: ಮದುವೆಗೆ ಬಂದಿದ್ದ ಅತಿಥಿಗಳಿಗೆ ಜಿರಲೆ ಸೇರಿ ಹಲವು ಹುಳ ಇದ್ದ ಹಾಳಾದ ಆಹಾರವನ್ನು ನೀಡಿದ ಆರೋಪ ಕೇಳಿ ಬಂದಿದೆ.

ತೆಲಂಗಾಣದ ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲ್ಕೊಂಡಾ ಸ್ಪಾ ಅಂಡ್ ರೆಸಾರ್ಟ್ ನಲ್ಲಿ ಅತಿಥಿಗಳಿಗೆ ಹುಳಗಳು ಹರಿದಾಡುತ್ತಿದ್ದ ಆಹಾರ ನೀಡಿದ್ದು, ಇದನ್ನು ಶ್ರೇಯಾ ಸಾರ್ದಾ ಸಾಮ್ ದಾನಿ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಹೋಟೆಲ್ ಸಿಬ್ಬಂದಿ ಈ ಆರೋಪವನ್ನು ಅಲ್ಲಗಳೆದಿದ್ದು, ಪರಿಹಾರ ಪಡೆಯುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಹುಳಗಳಿದ್ದ ಊಟವನ್ನು ನೀಡಿದಾಗಲೇ ನಾವು ಆಕ್ಷೇಪಿಸಿ, ಅಡುಗೆ ಮನೆ ಪ್ರವೇಶಿಸಲು ಮುಂದಾದೆವು. ಅದಕ್ಕೆ ಒಪ್ಪದೇ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಬಳಿಕ ಪೊಲೀಸರು ಮತ್ತು ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ರೇಯಾ ಹೇಳಿದ್ದಾರೆ.

ನರಸಿಂಗಿ ಠಾಣೆ ಸಬ್ ಇನ್ಸ್ ಪೆಕ್ಟರ್ ನಾಗ ರೆಡ್ಡಿ, ಘಟನೆಯ ಕುರಿತಾಗಿ ಲಿಖಿತ ದೂರು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...