alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಸಾವಿಗೆ ಕಾರಣವಾಯ್ತು ಕುದುರೆ ಸವಾರಿ

trs-horse

ಹೈದರಾಬಾದ್: ರಾಜಕೀಯ ಪಕ್ಷದ ಮುಖಂಡನ ಪುತ್ರ, ಮೋಜಿಗಾಗಿ ನಡೆಸಿದ ಕುದುರೆ ಸವಾರಿಯಿಂದ, ಬೈಕ್ ಸವಾರ ಪ್ರಾಣ ಕಳೆದುಕೊಂಡು, ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ.

ತೆಲಂಗಾಣದ ಹೈದರಾಬಾದ್ ನ ಮೈಲಾರದೇವಪಲ್ಲಿಯ ಟಿ.ಆರ್.ಎಸ್. ಮುಖಂಡ ಫಾರೂಕ್ ಅವರ ಪುತ್ರನೇ ಇಂತಹ ಕೃತ್ಯ ಎಸಗಿದವ.

ಮದುವೆ ಸಮಾರಂಭಕ್ಕೆ ಫಾರೂಕ್ ಕುದುರೆ ಖರೀದಿಸಿದ್ದಾನೆ. 16 ವರ್ಷದ ಅವರ ಪುತ್ರನಿಗೆ ಮನೆಯಲ್ಲಿದ್ದ ಕುದುರೆ ಸವಾರಿ ಮಾಡುವ ಮನಸ್ಸಾಗಿದೆ.

ಗೆಳೆಯರನ್ನು ಕರೆದುಕೊಂಡು ಮುಖ್ಯ ರಸ್ತೆಯಲ್ಲಿ ಕುದುರೆ ಸವಾರಿ ಹೊರಟಿದ್ದಾನೆ. ಈತನನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ಗೆಳೆಯರು ಜೋರಾಗಿ ಕೇಕೆ ಹಾಕಿ, ಕೂಗಾಡಿದ್ದಾರೆ. ಇದರಿಂದ ಬೆದರಿದ ಕುದುರೆ, ಎದುರಿನಲ್ಲಿ ಬರುತ್ತಿದ್ದ ಬೈಕ್ ಸವಾರರಿಗೆ ಕಾಲು ಎತ್ತಿ ಹೊಡೆದಿದೆ.

ಕುದುರೆಯ ಹೊಡೆತಕ್ಕೆ ಕೆಳಬಿದ್ದು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಒಬ್ಬಮೃತಪಟ್ಟಿದ್ದು, ಮತ್ತೊಬ್ಬ ಮೂಳೆ ಮುರಿದುಕೊಂಡಿದ್ದಾನೆ.

ಅಪ್ರಾಪ್ತರು ವಾಹನ ಚಲಾಯಿಸಿದರೆ, ಪೋಷಕರ ವಿರುದ್ದ ಕೇಸ್ ಹಾಕಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಯಾವ ಕೇಸ್ ಹಾಕಬೇಕೆಂದು ಮೊದಲಿಗೆ ಗೊಂದಲಕ್ಕೆ ಬಿದ್ದಿದ್ದ ಪೊಲೀಸರು, ಕೊನೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...