alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣ ದೇವಾಲಯಗಳಲ್ಲಿ ಭಕ್ತರಿಗೆ ಸ್ವೈಪಿಂಗ್ ಮಷಿನ್ ವ್ಯವಸ್ಥೆ

credit-card-swipe-machine

ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಾರ್ಡ್ ಸ್ವೈಪಿಂಗ್ ಸಿಸ್ಟಮ್ ಅಳವಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಜೊತೆಗೆ ದೇವಾಲಯದ ಅಧಿಕೃತ ವೆಬ್ ಸೈಟ್ ಗಳನ್ನು ಕೂಡ ಅಪ್ ಗ್ರೇಡ್ ಮಾಡಲಾಗುತ್ತಿದೆ. ಪ್ರಮುಖ ದೇವಸ್ಥಾನಗಳಲ್ಲಿ ಕಾರ್ಡ್ ಸ್ವೈಪಿಂಗ್ ಮಷಿನ್ ಅಳವಡಿಕೆ ಬಗ್ಗೆ ಸಚಿವ ಎ.ಇಂದ್ರಕರಣ್ ರೆಡ್ಡಿ ಹಿರಿಯ ಅಧಿಕಾರಿಗಳ ಜೊತೆ ಈಗಾಗ್ಲೇ ಚರ್ಚೆ ನಡೆಸಿದ್ದಾರೆ.

ನೋಟು ನಿಷೇಧದಿಂದಾಗಿ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಹಣ ಸಿಗುತ್ತಿಲ್ಲ. ಹಾಗಾಗಿ ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ ಗೆ ಅನುಕೂಲ ಮಾಡಿಕೊಡಲಾಗುವುದು ಅಂತಾ ತಿಳಿಸಿದ್ದಾರೆ.  ಮೊದಲು ಯದಾದ್ರಿ, ಭದ್ರಾದ್ರಿ, ಕಾಲೇಶ್ವರಂ, ವೇಮುಲವಾಡ, ಕೊಂಡಗಟ್ಟು ಮತ್ತು ಬಸರ ದೇವಾಲಯಗಳಲ್ಲಿ ಸ್ವೈಪಿಂಗ್ ಮಷಿನ್ ಗಳನ್ನು ಅಳವಡಿಸಲಾಗುತ್ತದೆ, ಹಂತಹಂತವಾಗಿ ಇದನ್ನು ಇತರ ದೇವಾಲಯಗಳಿಗೆ ವಿಸ್ತರಿಸಲಾಗುತ್ತದೆ.

ಭಕ್ತರು ಕಾಟೇಜ್ ಬುಕ್ಕಿಂಗ್, ದರ್ಶನದ ಟಿಕೆಟ್, ವಿಶೇಷ ಪೂಜೆ, ಡೊನೇಶನ್, ಪ್ರಸಾದದ ಹಣ ಪಾವತಿ, ಹಾಗೂ ಕಲ್ಯಾಣಕಟ್ಟಕ್ಕಾಗಿ ಸ್ವೈಪಿಂಗ್ ಮಷಿನ್ ಗಳನ್ನು ಬಳಸಿಕೊಳ್ಳಬಹುದು. ಹುಂಡಿ ಕಾಣಿಕೆಯೊಂದನ್ನು ಬಿಟ್ಟು ಬೇರೆಲ್ಲವೂ ಕ್ಯಾಶ್ ಲೆಸ್ ಆಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...