alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ಪ್ರೇಮಿಗಳಿಗೊಂದು ಭಾರೀ ಸಿಹಿ ಸುದ್ದಿ

telangana film

ಹೈದರಾಬಾದ್: ಚಲನಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ಹೆಚ್ಚು ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇನ್ನು ಮುಂದೆ ದಿನಕ್ಕೆ 5 ಪ್ರದರ್ಶನ ನಡೆಸಲಾಗುವುದು. ತೆಲಂಗಾಣ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ಇದುವರೆಗೆ ದಿನಕ್ಕೆ 4 ಪ್ರದರ್ಶನ ಮಾತ್ರ ನಡೆಸಲಾಗುತ್ತಿತ್ತು. ಸ್ಟಾರ್ ನಟರ ಚಿತ್ರಗಳು ಭರ್ಜರಿ ಓಪನಿಂಗ್ ಪಡೆದುಕೊಂಡ ಸಂದರ್ಭದಲ್ಲಿ ಮಾತ್ರ ಒಂದೆರಡು ದಿನ ಹೆಚ್ಚುವರಿ ಪ್ರದರ್ಶನ ನಡೆಸಲಾಗುತ್ತಿತ್ತು. ಇದೀಗ, ತೆಲಂಗಾಣ ಸರ್ಕಾರ 5 ಪ್ರದರ್ಶನ ನಡೆಸುವ ಕುರಿತಂತೆ ಚಿಂತಿಸಿದೆ. ತೆಲುಗು ಚಿತ್ರರಂಗದ ಅಭಿವೃದ್ಧಿಯ ಕುರಿತಂತೆ ವರದಿ ನೀಡಲು ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿ ನೀಡಿರುವ ವರದಿಯಲ್ಲಿ ದಿನಕ್ಕೆ 5 ಶೋ ನಡೆಸಲು ಶಿಫಾರಸು ಮಾಡಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಮಾರ್ನಿಂಗ್ ಶೋ, ಮಧ್ಯಾಹ್ನ 1 ಗಂಟೆಗೆ ಮ್ಯಾಟ್ನಿ, ಸಂಜೆ 4 ಗಂಟೆಗೆ ಇವನಿಂಗ್ ಶೋ, 7 ಗಂಟೆಗೆ ಫರ್ಸ್ಟ್ ಶೋ, 10 ಗಂಟೆಗೆ ಸೆಕೆಂಡ್ ಶೋ ನಡೆಸಿ ರಾತ್ರಿ 12.30 ರೊಳಗೆ ಪ್ರದರ್ಶನ ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ 3000 ಮಿನಿ ಥಿಯೇಟರ್ ಗಳನ್ನು ಆರಂಭಿಸಲು ಸಮಿತಿ ಸಲಹೆ ನೀಡಿದೆ. 200-300 ಮಂಧಿ ಕುಳಿತು ವೀಕ್ಷಿಸಬಹುದಾದ ಮಿನಿ ಥಿಯೇಟರ್ ಆರಂಭಿಸುವಂತೆ ಸಲಹೆ ಬಂದಿದೆ ಎಂದು ಸಚಿವ ತಲಸಾನಿ ಶ್ರೀನಿವಾಸ ಯಾದವ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...