alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಿಡ್ಜ್ ನಲ್ಲಿ ತಣ್ಣಗೆ ಮಲಗಿತ್ತು ಕಾಳಿಂಗ ಸರ್ಪ

kobra

ಈ ಬಾರಿ ಬೇಸಿಗೆಯ ಆರಂಭದಲ್ಲೇ ಸೆಖೆಯ ತೀವ್ರತೆ ಹೆಚ್ಚಾಗಿದೆ. ಬಿಸಿಲ ಬೇಗೆ ತಡೆಯಲಾಗದೆ ಜನರು ಎಸಿ, ಫ್ಯಾನ್, ಕೂಲರ್, ಫ್ರಿಡ್ಜ್ ಗಳ ಮೊರೆಹೋಗ್ತಿದ್ದಾರೆ. ಪ್ರಾಣಿಗಳು ಕೂಡ ಧಗೆಯನ್ನು ತಡೆಯಲಾಗದೆ ಒದ್ದಾಡ್ತಿವೆ. ಎಲ್ಲಾದ್ರೂ ತಣ್ಣಗಿನ ಜಾಗ ಸಿಗಬಹುದಾ ಅಂತಾ ಹುಡುಕಿಕೊಂಡು ಹೋಗ್ತಿವೆ.

ಅದೇ ರೀತಿ ಕಾಳಿಂಗ ಸರ್ಪವೊಂದು ತಣ್ಣಗಿದೆ ಅಂತಾ ಫ್ರಿಡ್ಜ್ ಒಳಹೊಕ್ಕು ಮಲಗಿಬಿಟ್ಟಿತ್ತು. ತೆಲಂಗಾಣದ ಸಿರ್ಸಿಲ್ಲಾ ಎಂಬ ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ನೀರು ಕುಡಿಯೋಣ ಅಂತಾ ಫ್ರಿಡ್ಜ್ ಬಾಗಿಲು ತೆರೆದ ಬಾಲಕಿ ಒಳಗೆ ಮಲಗಿದ್ದ ಕಾಳಿಂಗ ಸರ್ಪವನ್ನು ನೋಡಿ ಬೆಚ್ಚಿಬಿದ್ದಿದ್ಲು.

ಭಯದಿಂದ ಎಲ್ಲರನ್ನೂ ಕೂಗಿ ಕರೆದಿದ್ದಾಳೆ. ನಂತರ ಹಾವಾಡಿಗರನ್ನು ಕರೆಸಿ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯ್ತು. ತೆಲಂಗಾಣದಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧೆಡೆ ಇಂಥದ್ದೇ ಪ್ರಕರಣಗಳು ವರದಿಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...