alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕರನ್ನು ಕೊಳಚೆ ಹೊಂಡದಲ್ಲಿ ಮುಳುಗಿಸಿದ ಮುಖಂಡ

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬಿಜೆಪಿಯ ಮಾಜಿ ಮುಖಂಡನೊಬ್ಬ ಅಮಾನವೀಯವಾಗಿ ವರ್ತಿಸಿದ್ದಾನೆ. ಇಬ್ಬರು ದಲಿತ ಯುವಕರಿಗೆ ಕೊಳಚೆ ತುಂಬಿರೋ ಹೊಂಡದಲ್ಲಿ ಮುಳುಗೇಳುವಂತೆ ಸೂಚಿಸಿದ್ದಾನೆ. ಅನುಮತಿ ಇಲ್ಲದೇ ಯುವಕರು ಆತನ ಮರಳು ಅಡ್ಡೆಗೆ ಬಂದಿದ್ದಕ್ಕೆ ಈ ಶಿಕ್ಷೆ ನೀಡಿದ್ದಾನಂತೆ.

ಸೆಪ್ಟೆಂಬರ್ 16ರಂದು ನಡೆದಿರೋ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಈ ಕೃತ್ಯ ಎಸಗಿರೋ ಭರತ್ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ. ಈ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ, ಭರತ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿವೆ.

ಆದ್ರೆ ಆ ಯುವಕರು ಮಾತ್ರ ಭರತ್ ರೆಡ್ಡಿ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ್ದಾರೆ. ಗ್ರಾಮದ ಹೊರಭಾಗದಲ್ಲಿ ಭರತ್ ರೆಡ್ಡಿಗೆ ಸೇರಿದ ಮರಳಿನ ಅಡ್ಡೆಯಿದೆ. ಕೆ. ಲಕ್ಷ್ಮಣ್ ಹಾಗೂ ರಾಜೇಶ್ ಅಲ್ಲಿಗೆ ಬಂದಿದ್ರು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ರೆಡ್ಡಿ, ಇಬ್ಬರನ್ನೂ ಥಳಿಸಿದ್ದಾನೆ. ನಂತರ ಕೊಳಚೆ ತುಂಬಿದ್ದ ಹೊಂಡದಲ್ಲಿ ಮುಳುಗೇಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...