alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ಯೆಯ ತನಿಖೆ ನಡೆಸುತ್ತಿದ್ದ ಇನ್ಸ್ ಪೆಕ್ಟರ್ ನಾಪತ್ತೆ

ಶಾಸಕ ಕೋಮಟಿ ರೆಡ್ಡಿ ವೆಂಕಟರೆಡ್ಡಿಯವರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಬೊಡ್ಡು ಶ್ರೀನಿವಾಸ್ ಹಾಗೂ ಪಾಲಕುರಿ ರಮೇಶ್ ಅವರ ಹತ್ಯೆಯ ತನಿಖೆ ನಡೆಸುತ್ತಿದ್ದ ನಲಗೊಂಡ 2 ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್ವರಲು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ ತಮ್ಮ ಜೀಪ್ ಚಾಲಕನಿಗೆ ಠಾಣೆಗೆ ತೆರಳುವಂತೆ ಹೇಳಿದ ವೆಂಕಟೇಶ್ವರಲು ಅಲ್ಲಿ ತಮ್ಮ ಆಯುಧವನ್ನು ಡೆಪಾಸಿಟ್ ಮಾಡಿದ್ದಾರೆ. ಬಳಿಕ ಕಾಲ್ನಡಿಗೆಯಲ್ಲಿ ತೆರಳಿದ್ದು, ಮಧುಗುಲಾಪಲ್ಲಿ ಪೊಲೀಸ್ ಠಾಣೆಯಲ್ಲಿ ತಮ್ಮ ಅಧಿಕೃತ ಸಿಮ್ ನೀಡಿದ್ದಾರೆ.

ಇದಾದ ಬಳಿಕ ವೆಂಕಟೇಶ್ವರಲು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲವೆನ್ನಲಾಗಿದ್ದು, ಅವರ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಬೊಡ್ಡು ಶ್ರೀನಿವಾಸ್ ಹತ್ಯೆಯ ಪ್ರಕರಣವನ್ನು ಸಮರ್ಪಕವಾಗಿ ನಡೆಸುತ್ತಿಲ್ಲವೆಂದು ಶ್ರೀನಿವಾಸ್ ಪತ್ನಿ ಈ ಹಿಂದೆ ಆರೋಪಿಸಿದ್ದು, ಹತ್ಯೆ ಪ್ರಕರಣದ ತನಿಖೆಯ ಒತ್ತಡದಲ್ಲಿ ವೆಂಕಟೇಶ್ವರಲು ಸಿಲುಕಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...