alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಗಾಗಿ ಮದುವೆಯನ್ನೇ ಮುಂದೂಡಿದ ವಧು

The Hands Of An Indian Gujarati Bride And Bridegroom, A Ritual Performed In An Indian Gujarati Wedding, India

ವೃತ್ತಿ ಹಾಗೂ ಕುಟುಂಬ ಎರಡನ್ನೂ ನಿಭಾಯಿಸೋದು ಸವಾಲಿನ ಕೆಲಸ. ತೆಲಂಗಾಣದ 24 ವರ್ಷದ ಯುವತಿ ರಚನಾ ಅಲ್ಲೂರಿ ಮದುವೆಗಿಂತ್ಲೂ ಪರೀಕ್ಷೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾಳೆ.

ಮದುವೆ ಮುಹೂರ್ತವನ್ನು ಮುಂದೂಡಿ ಪರೀಕ್ಷೆ ಬರೆದಿದ್ದಾಳೆ. ರಚನಾ ಡಿಪ್ಲೊಮಾ ಇನ್ ಎಜುಕೇಶನ್ (ಡಿಎಡ್) ಮಾಡ್ತಿದ್ದಾಳೆ. 6 ತಿಂಗಳ ಹಿಂದೆಯೇ ಆಕೆಯ ಮದುವೆ ಫಿಕ್ಸ್ ಆಗಿತ್ತು. ಎಕ್ಸಾಮ್ ಬಹುಷಃ ಅಕ್ಟೋಬರ್ ನಲ್ಲಿ ಮುಗಿಯಬಹುದು ಅನ್ನೋದು ಅವಳ ಲೆಕ್ಕಾಚಾರ. ಆದ್ರೆ ಆಕಸ್ಮಿಕವಾಗಿ ಎರಡೂ ಒಂದೇ ದಿನ ಅಂದ್ರೆ ನವೆಂಬರ್ 25ರಂದೇ ನಿಗದಿಯಾಗಿಬಿಟ್ಟಿತ್ತು.

ಅತ್ತ ಮದುವೆಯನ್ನೂ ಬಿಡಲಾರೆ, ಪರೀಕ್ಷೆ ಬರೆಯದೇ ಇರಲಾರೆ ಎಂಬಂತಹ ಸ್ಥಿತಿ. ಕೊನೆಗೆ ರಚನಾ ಮದುವೆಗಿಂತ್ಲೂ ಪರೀಕ್ಷೆ ಮುಖ್ಯ ಎಂದುಕೊಂಡು ಮುಹೂರ್ತವನ್ನೇ ಮುಂದಕ್ಕೆ ಹಾಕಿಸಿದ್ದಾಳೆ. ಎರಡೂ ಮನೆಯವರು ಇದಕ್ಕೆ ಸಮ್ಮತಿಸಿದ್ದು ವಿಶೇಷ. ನವೆಂಬರ್ 25ರಂದು ಬೆಳಗ್ಗೆ 9-12 ಗಂಟೆವರೆಗೆ ರಚನಾಗೆ ಎಕ್ಸಾಮ್ ಇತ್ತು. ಮದುವೆಯ ಉಡುಪಿನಲ್ಲೇ ಬಂದ ರಚನಾ ಪರೀಕ್ಷೆ ಬರೆದಿದ್ದಾಳೆ. ಕೆಲ ಗಂಟೆಗಳ ಬಳಿಕ ಆಕೆಯ ವಿವಾಹ ಕೂಡ ನೆರವೇರಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...