alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಈ ಕಚೇರಿಯ ಬ್ರಹ್ಮಾಂಡ ಭ್ರಷ್ಟಾಚಾರ

ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಸಾಮಾನ್ಯ ಜನರು ಏನೇ ಕೆಲಸ ಆಗಬೇಕು ಅಂದ್ರೂ ಅಧಿಕಾರಿಗಳಿಗೆ ಲಂಚ ಕೊಡಲೇ ಬೇಕು. ಅದ್ರಲ್ಲೂ ಆರ್ ಟಿ ಓ ಕಚೇರಿಗಳಲ್ಲಂತೂ ಹಣ ಕೊಟ್ರೆ ಮುಂದಿನ ಕೆಲಸ. ಹೈದರಾಬಾದ್ ನ ಪತೆಂಚರು ಆರ್ ಟಿ ಓ ಕಛೇರಿಯಲ್ಲಿ, ವಾಹನ ನೋಂದಣಿ ಅಪ್ಲಿಕೇಷನ್ ಗಳು, ಡ್ರೈವಿಂಗ್ ಲೈಸೆನ್ಸ್ ಗಳ ಜೊತೆಗೆ ಬಂಡಲ್ ಗಟ್ಟಲೆ ಹಣ ಸಿಕ್ಕಿದ್ದು, ಇದು ಲಂಚದ ಹಣ ಎಂದು ಹೇಳಲಾಗ್ತಿದೆ.

ಪತೆಂಚೆರು ಆರ್ ಟಿ ಓ ಕಛೇರಿಯಲ್ಲಿ ವಾಹನಗಳ ನೋಂದಣಿ, ಎಲ್ ಎಲ್, ಡಿಎಲ್ ಮಾಡಿಸಿಕೊಳ್ಳಬೇಕು ಅಂದ್ರೆ ಈ ಕಚೇರಿಯ ಇನ್ಸ್ ಪೆಕ್ಟರ್ ಗೆ ಲಂಚ ಸಲ್ಲಿಸಲೇಬೇಕಂತೆ. ಇಲ್ಲಿ ಪ್ರತಿನಿತ್ಯ ಲಂಚಾವತಾರ ನಡೆಯುತ್ತಲೆ ಇದೆ. ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಗಳೂ ಕೂಡಾ ಹಣ ಕೊಟ್ರೆ ಮಾತ್ರ ಕಡತಗಳನ್ನ ಮುಂದೆ ಕಳಿಸುತ್ತಾರಂತೆ.

ಪತಂಚೆರು ಆರ್ ಟಿ ಓ ಕಚೇರಿಯ ಲಂಚಾವತಾರದ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ, ಪ್ರತಿಕ್ರಿಯಿಸಿರುವ ತೆಲಂಗಾಣ ಟ್ರಾನ್ಸ್ ಪೋರ್ಟ್ ಕಮೀಷನರ್, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...